Advertisement
ನವನಗರದ ಬಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ ಕಾಚಕ್ಕಿ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಿಟಿಡಿಎ ಸಿಎಒ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ “ದೀಡೆಕರೆ ಜಮೀನು’ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.
Related Articles
ಕಥೆಗಾರರ ಎಲ್ಲ ಕತೆಗಳನ್ನು ಪರಿಚಯಿಸಿ ಕತೆಗಳ ಒಳಗಿನ ತಲ್ಲಣವು ಕತೆಯಾಗಿ ಹೊರಬಂದಿವೆ.
Advertisement
ಈ ಸಂಕಲನದ ಕತೆಗಳು ಹತಾಶ ಭಾವ ಮೂಡಿಸುತ್ತವೆ. ನಮ್ಮೊಳಗಿನ ಬದುಕನ್ನು ಅನಾವರಣಗೊಳಿಸುತ್ತವೆ. ನಮ್ಮೊಳಗಿರುವ ಎರಡು ಪಾತ್ರಗಳನ್ನು ಮುಖಾಮುಖಿ ಮಾಡುವ ಕೆಲಸ ಕತೆಗಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಆ ಗುಣಗಳು ನಮ್ಮನ್ನು ಬದಲಿಸುತ್ತವೆ. ಕತೆಗಳಲ್ಲಿನ ಪಾತ್ರಗಳ ಬದುಕು ನಮ್ಮನ್ನು ಹಿಡಿದಿಡುತ್ತವೆ. ಕತೆ ಕಟ್ಟುವ ಬಗೆ ಹೇಗಿರಬೇಕೆಂದರೆ ಓದುಗರನ್ನು ಓದಿಸಿಕೊಂಡು ಹೋಗಬೇಕು. ಕಣ್ಣನ್ನು ಒದ್ದೆಯಾಗಿಸಬೇಕು. ಅಂತಹ ಶಕ್ತಿ ಇಲ್ಲಿನ ಕತೆಗಳಲ್ಲಿ ಮೂಡಿಬಂದಿದೆ ಎಂದರು.
ಗೌರವ ಉಪಸ್ಥಿತರಿದ್ದ ಧಾರವಾಡದ ವಿಶ್ರಾಂತ ಅಪರ ಜಿಲ್ಲಾಧಿಕಾರಿ ಎಚ್.ಪಿ. ಶೆಲ್ಲಿಕೇರಿ, ಶಿಕ್ಷಣ ಇಲಾಖೆ ವಿಶ್ರಾಂತ ಅಧಿಕಾರಿ ಸಿದ್ದರಾಮ ಮನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಥಾ ಸಂಕಲನದ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಾಚಕ್ಕಿ ಪ್ರಕಾಶನದ ಪ್ರಕಾಶಕ ಚೇತನ ನಾಗರಾಳ ಮಾತನಾಡಿದರು.
ನಾದಬಿಂದು ಕಲಾ ತಂಡದ ಸಂಗಮೇಶ ಪಾನಶೆಟ್ಟಿ ಹಾಗೂ ಕಲ್ಯಾಣಕುಮಾರ ಗೋಗಿ ನಾಡಗೀತೆ ಹಾಡಿದರು. ಈ ಸಂದರ್ಭದಲ್ಲಿ ಡಾ| ಯೋಗಪ್ಪನ್ನವರ, ಡಾ| ಸಿ.ಎಂ. ಜೋಶಿ, ಡಾ| ವಿಜಯಕುಮಾರ ಕಟಗಿಹಳ್ಳಿಮಠ, ಲಕ್ಷ್ಮಣ ಬಾದಾಮಿ, ತಾತಾಸಾಹೇಬ ಬಾಂಗಿ, ಕತೆಗಾರ ಕಲ್ಲೇಶ ಕುಂಬಾರ, ವೀರಭದ್ರ ಕೌದಿ, ವಿ.ಸಿ. ಹೆಬ್ಬಳ್ಳಿ, ಡಾ| ಪ್ರಕಾಶ ಖಾಡೆ, ಕಿರಣ ಬಾಳಾಗೋಳ ಸೇರಿದಂತೆ ಇತರರಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ| ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ವಂದಿಸಿದರು.
ಬಿಡುವಿಲ್ಲದ ವೇಳೆಯಲ್ಲೂ ಸಾಹಿತ್ಯ ಅಭಿರುಚಿಶಾಸಕ ಡಾ| ವೀರಣ್ಣ ಚರಂತಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದು ಅತ್ಯಂತ ಮಹತ್ವದ್ದು. ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಅಧಿಕಾರಿಯಾಗಿ ಬಿಡುವಿಲ್ಲದ ವೇಳೆಯಲ್ಲಿಯೂ ಮಲ್ಲಿಕಾರ್ಜುನ ಶೆಲ್ಲಿಕೇರಿ ಸಾಹಿತ್ಯ ಬರವಣಿಗೆ ರೂಢಿಸಿಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.