ಆ ಎಂಎಲ್‌ಎ ಪ್ರಸ್‌ಮೀಟ್ ಕರೆದಿದ್ದಾರೆ ನೋಡು, ಈ ಎಂ.ಪಿದು ಪೊ›ಗ್ರಾಂ ಇದೆ ಹೋಗ್ಬಾ.. ಸಿಟಿಗೆ ಸಿ.ಎಂ ಬಂದಿದ್ದಾರಂತೆ, ಅದೇನಂತ ಮಾಹಿತಿ ತಗೋ…, ಈ ವಾರ ಸ್ಟೋರಿ ಯಾಕ್ ಮಾಡಿಲ್ಲ? ಇಮ್ಮಿàಡಿಯಟಿÉ ಒಂದು ಸ್ಟೋರಿ ಕೊಡ್ಬೇಕು.. ಇಂಥ ಆರ್ಡರ್‌ಗಳನ್ನು ಪಾಲಿಸುವುದೊರಳಗೇ ಪತ್ರಕರ್ತನ ದಿನಚರಿ ಕಳೆದು ಹೋಗುತ್ತದೆ. ದಿನಾ ಬೆಳಗ್ಗೆ ಎದ್ದರೆ ಆಫೀಸಿನ ಕೆಲಸಗಳ ಒತ್ತಡಗಳಲ್ಲೇ ಮಿಂದು, ನಿನ್ನ ನೆನಪಿಗೂ ನಿನಗೂ ತೆರೆ ಎಳೆದಂತಾಗಿತ್ತು. ಬೆಳಗ್ಗೆ ಗಡಿಬಿಡಿಯಲ್ಲಿ ಹೊರಟರೆ ರೂಮು ತಲುಪುತ್ತಿದ್ದದ್ದು ರಾತ್ರಿ 11 ಕ್ಕೆ. ಈ ನಡುವೆ ಊಟ, ತಿಂಡಿಗಾಗಿ ಒಂದಿಷ್ಟು ಟೈಂ ಸಿಕ್ಕರೆ ಬಿಟ್ಟು ಹೋದ ನಿನ್ನನ್ನು ನೆನಪಿಸಿಕೊಂಡು ಅಳಲು ಕಣ್ಣವೆ ಕಾದರೂ ಸಿಕ್ಕದ ಸಮಯಕ್ಕೆ ಕಂಬನಿ ಶಪಿಸುತ್ತಿತ್ತು.
ಅಂದು ಗುರುವಾರದ ತಂಪಾದ ಸಂಜೆಯಲ್ಲಿ , ಡಿಗ್ರಿ ಓದಿದ ತುಮಕೂರು ಯುನಿವರ್ಸಿಟಿಯ ಕ್ಯಾಂಪಸ್ಸಿಗೆ ಹೋದೆ. ಮನಸ್ಸು ಏಕಾಂತ ಬಯಸಿತ್ತು. ಅದಾಗಲೇ ರವಿ ಜಾರಿ ಚಂದಮಾಮ ದಾಗುಂಡಿ ಇಡುತ್ತಿದ್ದ ಮೊಬ್ಬುಗತ್ತಲಿನ ಸಮಯ. ಅರವತ್ತು ದಾಟಿದ ಬಿಳಿಗಡ್ಡಧಾರಿಗಳೆಲ್ಲಾ ತಮ್ಮ ತಮ್ಮ ಯೌವ್ವನದ ದಿನಗಳನ್ನು ನೆನೆಯುತ್ತಾ ಸ್ನೇಹಬಳಗದೊಡನೆ ಶೇರ್ ಮಾಡಿಕೊಳ್ಳುತ್ತಾ ಪುಟ್ಟ ಪುಟ್ಟ ಹೆಜ್ಜ ಇಡುತ್ತಾ ವಾಕಿಂಗ್ ಮಾಡುತ್ತಿದ್ದರು. ಪಾರ್ಕಿನ ಅಲ್ಲಲ್ಲಿ ನವ ಪ್ರೇಮಿಗಳು ಲೋಕ ಮರೆತು ಪ್ರೀತಿಯ ಪಾಲುದಾರಿಕೆಯಲ್ಲಿ ಬ್ಯುಸಿಯಾಗಿದ್ದರು. ಇವರೆಲ್ಲರ ಮಧ್ಯೆ ನನ್ನವು ಒಂಟಿ ಹೆಜ್ಜೆಗಳು. ಗದ್ದಲವಿಲ್ಲದೆ ಸೂಸುವ ತಿಳಿಗಾಳಿ, ಆ ಚಿಗುರೆಲೆಗಳ ಮೊರೆತ, ಪ್ರಣಯಕ್ಕಿಳಿದವರ ಪಿಸುಮಾತುಗಳು. ಈ ಎಲ್ಲದರಿಂದ ಕಂಗೊಳಿಸುತ್ತಿದ್ದ ಆ ಸಂಜೆಯಲ್ಲಿ ನಿನ್ನ ನೆನಪಾಗದೆ ರಾತ್ರಿಯಾಗಲಿಲ್ಲ.
ಇಡುವ ಒಂದೊಂದು ಹೆಜ್ಜೆಗೂ ಉಮ್ಮಳಿಸುತ್ತಿದ್ದ ಹಸಿ ಹಸಿ ನೆನಪುಗಳಿಗೆ ಕಣ್ಣಾಲಿ ತುಂಬಿ ಬಂದಿತ್ತು. ಅಗೋ! ಅಂದು ಇಬ್ಬರೇ ಭೇಟಿಯಾದ ಜಾಗದಲ್ಲಿ ಮತ್ತಿಬ್ಬರು ಪ್ರೇಮಿಗಳನ್ನು ಕಂಡಾಗ ಮನಸ್ಸಿಗೇನೋ ಪಾಮರ ಖುಷಿ.
ಮಾತು ಮರೆತ ಮನಸ್ಸು ನಿನ್ನನ್ನೇ ಹಂಬಲಿಸಿತು. ಅರೆಕ್ಷಣ ಮರದ ಕೆಳಗೆ ಕಣ್ಮುಚ್ಚಿ ಧ್ಯಾನಿಸಿದೆ. ರಮ್ಯವಾದ ನಿನ್ನ ರೂಪ ಮುಂದೆ ಬಂದು “ಏಯ್ ಎದ್ದೇಳ್ಳೋ ಗೂಬೆ, ಸಾಕು ನಿದ್ದೆ ಮಾಡಿದ್ದು’ ಎಂದಂತಾಯ್ತು. ತಟಕ್ಕನೆ ಕಣಿºಟ್ಟು ನೋಡಿದೆ, ಸುತ್ತಲೂ ಕತ್ತಲೋ ಕತ್ತಲು. ಮತ್ತದೇ ಒಂಟಿಭಾವ.
-ಯೋಗೇಶ್ ಮಲ್ಲೂರು