Advertisement

Kulgeri Cross ಪ್ರವಾಹದ ನೀರಿಗೆ ಕಿತ್ತುಹೋದ ರಸ್ತೆ; ವಾಹನ ಸವಾರರ ಪರದಾಟ

08:38 PM Aug 08, 2024 | Team Udayavani |

ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ) ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿ ಹಂತಕ್ಕೆ ತಲುಪಿದ್ದು ಸತತವಾಗಿ ಹರಿಬಿಡಲಾದ ಪ್ರವಾಹದ ನೀರಿಗೆ ಮಲಪ್ರಭಾ ಹಳೆ ಸೇತುವೆ ರಸ್ತೆ ಕಿತ್ತು ಹೋಗಿದೆ.

Advertisement

ಸದ್ಯ ಪ್ರವಾಹ ಇಳಿಮುಖವಾಗಿದ್ದು ಜಲಾವೃತಗೊಂಡ ಸೇತುವೆ ಸಂಚಾರ ಪ್ರಾರಂಭವಾಗಿದೆ. ಆದರೆ ನೀರಿನ ರಭಸಕ್ಕೆ ಕಿತ್ತುಹೋದ ರಸ್ತೆಯಲ್ಲಿಯೇ ಕೆಲವರು ನಡೆದುಕೊಂಡು ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಇದೇ ಅಪಾಯಕಾರಿ ರಸ್ತೆಯಲ್ಲಿಯೇ ಕೆಲವರು ತಮ್ಮ ವಾಹನ ಸಂಚಾರ ಪ್ರಾರಂಭಿಸಿ ಹರಸಾಹಸ ಪಡುತ್ತಿದ್ದಾರೆ.

ಕೋಟಿ..ರೂ ನೀರಲ್ಲಿ ಹೋಮ: ಹಿಂದಿನ ಶಾಸಕರಾಗಿದ್ದ ಸಿಎಂ ಸಿದ್ಧರಾಮಯ್ಯನವರು ಈ ರಸ್ತೆ ಮರು ನಿರ್ಮಾಣಕ್ಕೆ ಕಳೆದ ಬಾರಿ ಕೋಟಿ ಅನುದಾನ ನೀಡಿದ್ದರು. ಆದರೆ ಗುತ್ತಿಗೆದಾರ ಕಳಪೆ ರಸ್ತೆ ನಿರ್ಮಿಸಿ ಕೈ ತೊಳೆದುಕೊಂಡಿದ್ದು ಕಾಮಗಾರಿ ಮುಗಿದ ಒಂದೇ ವರ್ಷದಲ್ಲಿ ನಿರ್ಮಿಸಿದ ರಸ್ತೆ ಹಾಳಾಗಿದೆ. ನಿರ್ಮಾಣಗೊಂಡ ಸೇತುವೆಗಳು ಸಹ ಮುರಿದು ಬಿದ್ದು ವಾಹನಗಳ ಸಂಚಾರವೂ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು ವಿದ್ಯಾರ್ಥಿಗಳು ವರ್ಷದಲ್ಲಿ 8ರಿಂದ 10ತಿಂಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಪಿ.ಡಬ್ಲ್ಯೂ.ಡಿ ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ವರ್ಷ ಕೋಟಿ ಅನುದಾನ ಬಳಸಿ ನೂತನ ರಸ್ತೆ ನಿರ್ಮಾಣ ಮಾಡಿದ್ದರೂ ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಿದ ರಸ್ತೆಯಂತಾಗಿದೆ. ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕಳಪೆ ಗುಣಮಟ್ಟ ರಸ್ತೆ ನಿರ್ಮಿಸಲಾಗಿದೆ ಎಂಬುದೆ ಗ್ರಾಮಸ್ಥರ ಆರೋಪ.

ಪ್ರತಿ ವರ್ಷ ಪ್ರವಾಹ ಬಂದಾಗ ಜನಪ್ರತಿನಿಧಿಗಳ ಜೊತೆ ಪಿ.ಡಬ್ಲ್ಯೂಡಿ ಅಧಿಕಾರಿಗಳು ಸಹ ಬರ್ತಾರೆ, ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಸ್ತಾರೆ ಕಂಡು ಕಾಣದಂತೆ ಇಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾರೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Advertisement

ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯ ದಿಂದ ನಮ್ಮೂರ ರಸ್ತೆ ಹಾಳಾಗಿ ಹೋಗಿದೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸುವುದರ ಮೂಲಕ ಈ ಬಾರಿ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next