Advertisement

ನಿರಾಣಿ ವ್ಯಕ್ತಿಯಷ್ಟೇ ಅಲ್ಲ, ದೊಡ್ಡ ಶಕ್ತಿ;  ಬೀಳಗಿ ಮಾದರಿ ಕ್ಷೇತ್ರ ನಿರ್ಮಾಣದ ಸಂಕಲ್ಪ

08:57 AM Apr 24, 2023 | Team Udayavani |

ಬಾಗಲಕೋಟೆ: ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ಮೂಲಕ 6 ಸಾವಿರ ಕೇಂದ್ರ ಸರ್ಕಾರ ನೀಡಿದರೆ, ರಾಜ್ಯ ಸರ್ಕಾರ 4 ಸಾವಿರ ನೀಡುವ ಮೂಲಕ ವಾರ್ಷಿಕ 10 ಸಾವಿರ ನೀಡುತ್ತಿವೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಒದಗಿಸುವ ಜೊತೆಗೆ ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳ ಶಿಕ್ಷಣಕ್ಕೆ ಜೊತೆಯಾಗಿ ನಿಂತಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಹೇಳಿದರು.

Advertisement

ಬೀಳಗಿ ಕ್ಷೇತ್ರದ ಗೋವಿನಕೊಪ್ಪ, ಕಲಾದಗಿ ಗ್ರಾಮದಲ್ಲಿ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿ ಮತಯಾಚನೆ ಮಾಡಿದ ಅವರು, ತುಳಸಿಗೇರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಎಲ್ಲ ವರ್ಗದ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಬಿಜೆಪಿ ಬದ್ಧವಾಗಿ ಕಾರ್ಯ ನಿರ್ವಹಿಸಿದೆ. 20 ವರ್ಷಗಳಲ್ಲಿ 3 ಬಾರಿ ಶಾಸಕರಾಗಿ, 2 ಅವಧಿಗೆ ಸಚಿವರಾಗಿ ಮುರುಗೇಶ ನಿರಾಣಿ ಬೀಳಗಿ ಮತಕ್ಷೇತ್ರ ಹಾಗೂ ಕರ್ನಾಟಕದ ಜನತೆಯ ಸೇವೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಬೀಳಗಿಯಲ್ಲಿ ನೀರಾವರಿ, ಶಿಕ್ಷಣ, ರಸ್ತೆ ಮೂಲ ಸೌಕರ್ಯ ಎಲ್ಲ ರಂಗಗಳಲ್ಲೂ ಅಭಿವೃದ್ಧಿಯಾಗಿದೆ. ಬೀಳಗಿ ಜನತೆಯ ಬಗ್ಗೆ ವಿಶೇಷ ಅಂತಃಕರವಿರುವ ಮುರುಗೇಶ ನಿರಾಣಿ ಅವವರನ್ನು ಮತ್ತೂಮ್ಮೆ ದಾಖಲೆ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಮಾಡಿದ ಜನಸೇವೆಗೆ ಪ್ರತಿಫಲವಾಗಿ ಹೋದಲ್ಲೆಲ್ಲ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನತೆಯ ಆಶಯ-ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. 3 ಬಾರಿ ಆಶೀರ್ವಾದ ಮಾಡಿದ್ದೀರಿ. ಈ ಬಾರಿಯೂ ನಿಮ್ಮ ಬೆಂಬಲ-ಆಶೀರ್ವಾದವಿರಲಿ ಎಂದು ಮತದಾರರಲ್ಲಿ ವಿನಂತಿಸಿದರು. ಕಾಂಗ್ರೆಸ್‌ ಜಾತಿ-ಜಾತಿಗಳಲ್ಲಿ ಜಗಳ ಹಚ್ಚುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತದೆ. ಬೀಳಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ದ್ದು ಈ ಬಾರಿ ಖೇಲ್‌ ಕತಂ ನಾಟಕ ಬಂದ್‌ ಆಗಲಿದೆ ಎಂದರು.

Advertisement

ಈ ವೇಳೆ ವೆಂಕಟೇಶ ದಾಸನ್ನವರ, ವಿಠಲ ಸೊನ್ನದ, ಶ್ರೀನಿವಾಸ ಪೂಜಾರ, ಸುರೇಶ ಮಾದರ, ಮಂಜುಗೌಡ ಪಿ. ಪಾಟೀಲ, ಶಿವಪುತ್ರಪ್ಪ ದಾಸನ್ನವರ, ಉದಂಡಪ್ಪ ತಪರೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next