Advertisement

ಫಂಕ್ಷನ್ ಊಟಕ್ಕೆ ಹೋಗ್ತಾ ಇದ್ದೀರಾ? ಸ್ವಲ್ಪ ಈ ರೀಸರ್ಚ್ ವರದಿ ಓದಿ!

10:27 AM Oct 15, 2019 | Hari Prasad |

ವಾಷಿಂಗ್ಟನ್‌ : ನೀವು ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೊಟೇಲಲ್ಲೋ, ರೆಸ್ಟೋರೆಂಟಲ್ಲೋ ಅಥವಾ ಸಮಾರಂಭದಲ್ಲೋ ಊಟಕ್ಕೆ ಕೂತಾಗ ಒಂದು ಪಾಲು ಜಾಸ್ತಿಯೇ ತಿನ್ನುತ್ತೀರಾ? ಹಾಗಾದ್ರೆ ಅದಕ್ಕೆ ಇಲ್ಲಿದೆ ಕಾರಣ ನೋಡಿ. ಜನರು ತಮ್ಮ ಕುಟುಂಬದವರು ಅಥವಾ ಗೆಳಯರೊಂದಿಗೆ ಊಟಕ್ಕೆ ಕುಳಿತಾಗ ಒಂದು ಪಟ್ಟು ಜಾಸ್ತಿ ಆಹಾರ ಸೇವನೆ ಮಾಡುತ್ತಾರೆ ಎಂದು ವಾಷಿಂಗ್ಟನ್ ಮೂಲದ ಸಂಶೋಧನ ಕೇಂದ್ರದ ವರದಿಯೊಂದರಿಂದ ಬಹಿರಂಗವಾಗಿದೆ.

Advertisement

ತಮ್ಮ ಆಪ್ತರ ಗುಂಪಿನಲ್ಲಿ ಆಹಾರ ಸೇವಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಮಾಮೂಲಿಗಿಂತ ಶೇ.48 ರಷ್ಟು ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಎಂಬ ಕುತೂಹಲಕಾರಿ ಅಂಶ ಈ ವರದಿಯಲ್ಲಿದೆ. ಇನ್ನು, ಮಹಿಳೆಯರು ತಾವು ಒಬ್ಬರೇ ಆಹಾರ ಸೇವಿಸುವಾಗ ಆ ಪ್ರಮಾಣಕ್ಕಿಂತ ಗೆಳತಿಯರ ಅಥವಾ ಕುಟುಂಬದವರ ಗುಂಪಿನಲ್ಲಿದ್ದಾಗ ಮಾಮೂಲಿಗಿಂತ ಶೇ.29 ರಷ್ಟು ಹೆಚ್ಚು ಆಹಾರವನ್ನು ಸೇವಿಸುತ್ತಾರಂತೆ!

ಈ ಸಮೀಕ್ಷೆಯನ್ನು ವಾಷಿಂಗ್ಟನ್, ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸಿವೆ. ತಾವು ಸಣ್ಣ ಆಗಬೇಕೆಂದು ಬಯಸುವವರು ಅಥವಾ ಡಯಟ್‌ ಮಾಡಬೇಕೆಂದು ಸೀರಿಯಸ್ ಆಗಿ ಯೋಚಿಸುತ್ತಿರುವವರು ಅದಷ್ಟು ಸಮಾರಂಭದ ಊಟಗಳಿಂದ ಅಥವಾ ಔತಣ ಕೂಟಗಳಿಂದ ದೂರ ಇರುವುದು ಎನ್ನುವ ಸಲಹೆಯನ್ನೂ ಸಹ ಈ ಸಂಶೋಧನಾ ವರದಿ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next