Advertisement
19 ಕೆಜಿ ತೂಕ, 12 ಅಡಿ ಉದ್ದದ ಹೆಬ್ಬಾವು ಮೊಲ ತಿಂದು ಸೇತುವೆ ಪಕ್ಕದ ಪೊದೆಯಲ್ಲಿ ಸೇರಿಕೊಂಡಿತ್ತು. ಈ ಮಾರ್ಗದಲ್ಲಿ ಹೊಲಗಳಿಗೆ ಹೋಗುತ್ತಿದ್ದ ಮಹಿಳೆಯರ ಕಣ್ಣಿಗೆ ಈ ಹಾವು ಬಿದ್ದಿತ್ತು.
Related Articles
Advertisement
ನಂತರ ಅರಣ್ಯ ಅಧಿಕಾರಿಗಳ ಸಲಹೆ ಮೇರೆಗೆ ಸೆರೆಹಿಡಿದ ಹೆಬ್ಬಾವನ್ನು ನಗರದ ಪ್ರಾಣಿ ಸಂಗ್ರಹಾಲಯಕ್ಕೆ ತಂದು ಉರಗ ತಜ್ಞ ಪ್ರಶಾಂತ ಬಿಟ್ಟಿದ್ದಾರೆ. ಪ್ರಶಾಂತ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನು, ಈ ಹೆಬ್ಬಾವು ಮಾನವನಿಗೆ ಅಪಾಯಕಾರಿ ಅಲ್ಲ. ಜತೆಗೆ ಇದು ವಿಷಕಾರಿಯೂ ಅಲ್ಲ. ಇದೊಂದು ವಿಷ ರಹಿತ ಹೆಬ್ಬಾವು ಎಂದು ಉರಗ ತಜ್ಞ ಪ್ರಶಾಂತ ತಿಳಿಸಿದ್ದಾರೆ.