Advertisement

KS Eshwarappa ಬಂಡಾಯ ಬಗ್ಗೆ ವರಿಷ್ಠರಿಗೆ ವರದಿ ರವಾನೆ

10:20 PM Mar 16, 2024 | Team Udayavani |

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರುವುದು ಸಹಿತ ಟಿಕೆಟ್‌ ಹಂಚಿಕೆ ಬಳಿಕ ಎಲ್ಲೆಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂಬ ಬಗ್ಗೆ ವರಿಷ್ಠರಿಗೆ ರಾಜ್ಯ ಬಿಜೆಪಿ ಘಟಕದಿಂದ ವರದಿ ಕಳುಹಿಸಲಾಗಿದೆ.

Advertisement

ರಾಜ್ಯದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಚುನಾವಣ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಮೂಲಕ ವರದಿಯನ್ನು ಕಳುಹಿಸಲಾಗಿದೆ. ಮಾ.18ರಂದು ನಡೆಯುವ ಮೋದಿ ಕಾರ್ಯಕ್ರಮದೊಳಗಾಗಿ ಎಲ್ಲವನ್ನೂ ತಹಬಂದಿಗೆ ತರುವಂತೆ ಕೋರಲಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಈಶ್ವರಪ್ಪ ಬಂಡಾಯ ಶಮನ ರಾಜ್ಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ಯಾವ ಮಾರ್ಗದಲ್ಲಿ ಅವರನ್ನು ಶಾಂತಗೊಳಿಸಬೇಕೆಂಬುದು ಅರ್ಥವಾಗುತ್ತಿಲ್ಲ. ಈಶ್ವರಪ್ಪ ಸಮಾಧಾನಗೊಳ್ಳುತ್ತಾರೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಮಾತ್ರ ಯಾವುದೇ ಕಾರಣಕ್ಕೂ ತಮ್ಮ ನಿಲುವು ಬದಲಿಲ್ಲ ಎಂದು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next