Advertisement
ಇದು ಕಾನೂನು ಬಾಹಿರವೆಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಅಲ್ಲದೇ, ಈ ರೀತಿ ವರ್ತಿಸಿದ್ದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ತಲಾ 50,000 ರೂ.ಗಳ ದಂಡವನ್ನೂ ವಿಧಿಸಿದೆ. ಹಣಕಾಸು ಸಂಸ್ಥೆಗಳ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗ್ರಾಹಕರ ವಾಹನ ಜಪ್ತಿಗೆ ರಿಕವರಿ ಏಜೆಂಟ್‌ಗಳನ್ನು ಬಳಸುವುದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಸ್ಥಿ ಸಾಲ ಮರುಪಾವತಿಗಾಗಿಯೇ ಇರುವ ನಿಯಮಗಳ ಅನ್ವಯವಷ್ಟೇ ಬ್ಯಾಂಕ್‌ಗಳು ವಸೂಲಾತಿ ನಡೆಸಬೇಕು ಎಂದಿದ್ದಾರೆ. ಜತೆಗೆ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಜತಗೆ ಈ ರೀತಿ ವ್ಯವಹರಿಸುವ ರಿಕವರಿ ಏಜೆಂಟ್‌ಗಳ ವಿರುದ್ಧವೂ ಕೇಸು ದಾಖಲಿಸಲು ನ್ಯಾಯಪೀಠ ಪೊಲೀಸರಿಗೆ ಆದೇಶಿಸಿದೆ.
Advertisement
ವಾಹನ ಜಪ್ತಿಗೆ ರಿಕವರಿ ಏಜೆಂಟ್ ಬಳಸುವಂತಿಲ್ಲ
09:53 PM May 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.