Advertisement
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಕೊಲ್ಲಂಗಾನದ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ತೆಂಕುತಿಟ್ಟು ‘ಬಣ್ಣದ ವೇಷದ ಕಮ್ಮಟ’ ಹಾಗೂ ದಾಖಲೀಕರಣ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ ಕೂಡ್ಲು ನಿರೂಪಿಸಿ, ವಂದಿಸಿದರು.
ಕಮ್ಮಟಕಮ್ಮಟದಲ್ಲಿ ಸಹಸ್ರಾಕ್ಷ-ದೇವೇಂದ್ರ ಬಣ್ಣಗಾರಿಕೆ ಪ್ರಾತ್ಯಕ್ಷಿಕೆ, ಹಿರಣ್ಯಾಕ್ಷ- ವರಾಹ, ವೃತ್ರಜ್ವಾಲೆ(ಹೆಣ್ಣು ಬಣ್ಣ), ಅತಿಕಾಯ, ವಿದ್ಯುಜ್ವಹØ, ಪೂತನಿ, ಕಿಮ್ಮಿàರ, ರಾವಣ, ಭಗದತ್ತ, ಬಲರಾಮ, ತಾಮ್ರಧ್ವಜ, ಗರುಡ, ಯಮ-ಚಿತ್ರಗುಪ್ತ, ಕಾರ್ತವೀರ್ಯನ ಒಡ್ಡೋಲಗ, ದತ್ತಾತ್ರೇಯ, ಹನುಮಂತನ ಒಡ್ಡೋಲಗಗಳ ಬಣ್ಣಗಾರಿಕೆ, ರಂಗ ಸಾಕ್ಷಾತ್ಕಾರ ಪ್ರದರ್ಶನ, ದಾಖಲೀಕರಣ ಅವಲೋಕನಗಳು ನಡೆಯಿತು. ತೆಂಕುತಿಟ್ಟಿನ ದಶಾವತಾರಿ ಸೂರಿಕುಮೇರಿ ಕೆ.ಗೋವಿಂದ ಭಟ್ ಅವರು ಪೂರ್ತಿ ಕಮ್ಮಟದ ಅವಲೋಕನ ನಡೆಸಿದರು. ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ನಿರ್ವಹಿಸಿದರು. ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಹಿಮ್ಮೇಳದಲ್ಲಿ ಪುಂಡಿಕೈ ಗೋಪಾಲಕೃಷ್ಣ ಭಟ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಲಕ್ಷ್ಮೀನಾರಾಯಣ ರಾವ್ ಅಡೂರು, ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ, ಮುರಾರಿ ಭಟ್ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ಕೆ.ಗೋವಿಂದ ಭಟ್ ಸೂರಿಕುಮೇರಿ, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಉಬರಡ್ಕ ಉಮೇಶ ಶೆಟ್ಟಿ, ರಮೇಶ ಭಟ್ ಸರವು, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗಣಾಧಿರಾಜ ಉಪಾಧ್ಯಾಯ, ಹರಿನಾರಾಯಣ ಎಡನೀರು, ಶಂಭಯ್ಯ ಭಟ್ ಕಂಜರ್ಪಣೆ, ಮನೀಶ್ ಪಾಟಾಳಿ, ರವಿರಾಜ ಪನೆಯಾಲ, ಜಯರಾಮ ಪಾಟಾಳಿ ಪಡುಮಲೆ, ಮಾಧವ ಪಾಟಾಳಿ ನೀರ್ಚಾಲು, ಮನೀಶ್ ಪಾಟಾಳಿ ಎಡನೀರು, ಕಿಶನ್ ಅಗ್ಗಿತ್ತಾಯ, ಶ್ರೀಗಿರಿ, ಸ್ವಸ್ಥಿಕ್, ಉಪಾಸನಾ ಪಂಜರಿಕೆ, ಬಾಲಕೃಷ್ಣ ಸೀತಾಂಗೋಳಿ, ಪ್ರಕಾಶ್ ನಾಯಕ್, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಭಾಗವಹಿಸಿದ್ದರು. ಸಮಾರೋಪ
ಸಮಾರೋಪದಲ್ಲಿ ಕೆ. ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಸದಸ್ಯ ಸತೀಶ ಅಡಪ ಸಂಕಬೈಲು, ಡಾ.ಶ್ರುತಕೀರ್ತಿರಾಜ್ ಉಜಿರೆ, ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಕಲಾಪೋಷಕ ಮಂಜುನಾಥ ಡಿ.ಮಾನ್ಯ ಉಪಸ್ಥಿತರಿದ್ದರು.