Advertisement
ಕಾರ್ಗಿಲ್ ವಿಜಯ ದಿನದ ನಿಮಿತ್ತ ಅಥರ್ವಾ ಫೌಂಡೇಶನ್ ವತಿಯಿಂದ ಶಣ್ಮುಖಾನಂದನ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಆಶಿಶ್ ಶೇಲಾರ್, ಶಾಸಕ ಮಂಗಲ್ ಪ್ರಭಾತ್ ಲೋಧಾ, ಶಾಸಕ ರಾಜ್ ಪುರೋಹಿತ್, ಲೆಫ್ಟಿನೆಂಟ್ ಜನರಲ್ ಎಸ್. ಕೆ. ಪರಾಶರ್, ವಿಂಗ್ ಕಮಾಂಡರ್ ಜಗಮೋಹನ್‌ನಾಥ್, ಚಾರಿಟಿ ಅಧಿಕಾರಿ ಸಂಜಯ್ ಭಾಟಿಯಾ, ಆಪರೇಶನ್ ವಿಜಯದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
Related Articles
Advertisement
ಮಹಾರಾಷ್ಟ್ರದ ಹುತಾತ್ಮರ ಕುಟುಂಬ ಗಳಿಗೆ ನೀಡುವ ಪರಿಹಾರ ನಿಧಿಯನ್ನು ಹೆಚ್ಚಿಸಲಾಗಿದೆ. ಈಗ ನೆರವು ಸುಮಾರು 5 ಲಕ್ಷ ರೂ. ದಿಂದ ಹೆಚ್ಚಿಸಿ ಒಂದು ಕೋಟಿ ರೂ.ಗಳಷ್ಟು ಮಾಡಲಾಗಿದೆ. ನಾವೆಲ್ಲರೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ, ಸುಮಾರು 125 ಕೋಟಿ ಜನರು ಸೈನಿಕರ ಕುಟುಂಬದೊಂದಿಗೆ ಇದ್ದಾರೆ ಎಂದು ನಾವು ಭರವಸೆ ನೀಡಬೇಕು.
5 ಎಕರೆ ಭೂಮಿ:
ಹುತಾತ್ಮರ ಕುಟುಂಬಗಳಿಗೆ 5 ಎಕರೆ ಭೂಮಿಯನ್ನು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಈ ಭೂ ಖರೀದಿಯಲ್ಲಿ ಸ್ಟಾಂಪ್ ಡ್ಯೂಟಿ ಮನ್ನಾ ಮಾಡಲಾಗುತ್ತದೆ. ಈ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರವು ಆಗಸ್ಟ್ 15 ಹಾಗೂ ಜನವರಿ 26ರಂದು ಹುತಾತ್ಮರ ಕುಟುಂಬದವರನ್ನು ಸಮ್ಮಾನಪೂರ್ವಕ ಸರಕಾರಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದರು.
ಅಥರ್ವಾ ಫೌಂಡೇಶನ್ ವತಿಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿ ಸಲು ವಿಶೇಷ ಕಾರ್ಯಕ್ರಮವನ್ನು ನಡೆಯಿತು. ಆಪರೇಶನ್ ವಿಜಯ್‌ದ ಬಗ್ಗೆ ಕಿರುಚಿತ್ರವನ್ನು ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾಯಿತು.
ಹುತಾತ್ಮರ ಕುಟುಂಬಗಳಿಗಾಗಿ ಅಥರ್ವಾ ಫೌಂಡೇಶನ್ ಮಾಡಿದ ಕಾರ್ಯಗಳ ಬಗ್ಗೆ ಸುನಿಲ್ ರಾಣೆ ಮಾಹಿತಿ ನೀಡಿದರು. ಫೌಂಡೇಶನ್ ವತಿಯಿಂದ ವರ್ಷಾ ರಾಣೆ ಅವರು ಹುತಾತ್ಮರಾದ ಕುಟುಂಬಗಳನ್ನು ಗೌರವಿಸಿದರು.