Advertisement

Blood donation camp: 1,100 ಯೂನಿಟ್‌ ರಕ್ತ ಸಂಗ್ರಹಿಸಿ ದಾಖಲೆ

03:04 PM Aug 16, 2023 | Team Udayavani |

ಮಳವಳ್ಳಿ: ಪಟ್ಟಣದ ರೋಟರಿ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಳವಳ್ಳಿ ಯುವಕ ಮಿತ್ರರು ಹಾಗೂ ಸಂಘ-ಸಂಸ್ಥೆಗಳು ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ದಾಖಲೆಯ ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

Advertisement

ರಕ್ತ ಸಂಗ್ರಹಿಸುವ ಮೂಲಕ ತಮ್ಮ ಮಳವಳ್ಳಿ ಯುವಕ ಮಿತ್ರರ ಹೆಸರಿನಲ್ಲಿದ್ದ ದಾಖಲೆಯನ್ನು ಮತ್ತೆ ಅವರೇ ಮುರಿದಿದ್ದಾರೆ. 2018ರಲ್ಲಿ ರೋಟರಿ ಸಂಸ್ಥೆಯ ಆವರಣದಲ್ಲಿಯೇ ನಡೆದಿದ್ದ ಶಿಬಿರದಲ್ಲಿ 1073 ಯೂನಿಟ್‌ ರಕ್ತ ಸಂಗ್ರಹ ಮಾಡುವ ಮೂಲಕ ಶಿಬಿರವೊಂದರಲ್ಲಿ ಅತಿಹೆಚ್ಚು ರಕ್ತ ಸಂಗ್ರಹ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಅದನ್ನು 1100 ಯೂನಿಟ್‌ ಏರಿಕೆ ಮಾಡಿಕೊಂಡಿದ್ದಾರೆ.

ಮಂಡ್ಯದ ಸರ್ಕಾರಿ ಜಿಲ್ಲಾಸ್ಪತ್ರೆಯ ರಕ್ತನಿ  ಕೇಂದ್ರ(ಮಿಮ್ಸ್‌), ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ, ಚಾಮರಾಜನಗರದ ಸರ್ಕಾರಿ ಜಿಲ್ಲಾಸ್ಪತ್ರೆ, ಮೈಸೂರಿನ ಕೆ.ಆರ್‌.ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದ ಶಿಬಿರದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ವಿವಿಧೆಡೆಯಿಂದ ರಕ್ತದಾನಿಗಳು ರಕ್ತದಾನ ಮಾಡಿ ಮತ್ತೂಂದು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.

ರಕ್ತದಾನದ ಮಹತ್ವ ಎಲ್ಲರೂ ಅರಿಯಬೇಕು: ಹೈಕೋರ್ಟ್‌ನ ನ್ಯಾಯಾಧೀಶರಾದ ರಾಚಯ್ಯ ಮಾತನಾಡಿ, ಇಷ್ಟೊಂದು ದೊಡ್ಡ ಪ್ರಮಾಣದ ರಕ್ತದಾನ ಶಿಬಿರದ ನಿರೀಕ್ಷೆ ಇರಲಿಲ್ಲ. ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೂಬ್ಬರಿಗೆ ನೀಡಿ ಜೀವ ಉಳಿಸುವಂಥ ಕೆಲಸ ನಿಜಕ್ಕೂ ಶ್ರೇಷ್ಠವಾಗಿದೆ. ರಕ್ತದಾನದ ಮಹತ್ವವನ್ನು ಅರಿತು ಮಳವಳ್ಳಿ ಪಟ್ಟಣದಲ್ಲಿ ದಾಖಲೆ ಪ್ರಮಾಣದ ರಕ್ತವನ್ನು ಸಂಗ್ರಹಿಸಿ ಅವಶ್ಯಕ ರೋಗಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯದ ಗಮನ ಸೆಳೆದಿರುವ ಯುವಕರು: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶಿಬಿರದ ಸ್ಥಳಕ್ಕೆ ಭೇಟಿ ನೀಡಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು, ಮಳವಳ್ಳಿ ಯುವಕ ಮಿತ್ರರು ನಿರಂತರವಾಗಿ ರಕ್ತದಾನ ಶಿಬಿರ, ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ರಾಜ್ಯದ ಗಮನ ಸೆಳೆದಿರುವುದು ಹೆಮ್ಮೆ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Advertisement

ಯುವಕ ಮಿತ್ರರಿಗೆ ಕೃತಜ್ಞತೆ: ಸಾವಿರಾರು ಯೂನಿಟ್‌ ರಕ್ತವನ್ನು ಒಂದೇ ಕಡೆಯಲ್ಲಿ ಸಂಗ್ರಹಿಸಿ ರೋಗಿಗಳಿಗೆ ನೀಡುವುದು ಸುಲಭದ ಮಾತಲ್ಲ. ಆದರೇ ಒಂದು ತಿಂಗಳಿಂದಲೂ ಸಮಾಜಿಕ ಜಾಲತಾಣ, ಬಿತ್ತಿ ಪತ್ರ ಹಂಚುವುದು, ಆಟೋ ಪ್ರಚಾರ, ವಿದ್ಯಾರ್ಥಿಗಳಿಂದ ಜಾಥ ಸೇರಿದಂತೆ ವಿಶೇಷ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿರುವ ಯುವಕ ಮಿತ್ರರಿಗೆ ಕ್ಷೇತ್ರದ ಶಾಸಕರಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.

ಮಳವಳ್ಳಿಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಇಲ್ಲಿನ ಯುವಕರ ಶ್ರಮದ ಫಲವಾಗಿದೆ.  ತುರ್ತು ಪರಿಸ್ಥಿಯಲ್ಲಿರುವ ರೋಗಿಗಳಿಗೆ ರಕ್ತ ನೀಡುವುದು ಹಾಗೂ ಗಿಡ ಬೆಳೆಸುವ ಕಾಯಕ ನಿರಂತರವಾಗಿ ಮುಂದುವರಿಯಲಿ ಎಂದರು.

ಸಾರ್ವಜನಿಕರು, ಪೊಲೀಸರು, ಪತ್ರಕರ್ತರು, ವಿಕಲಚೇತನರು, ಮಹಿಳೆಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪಿ.ಮಾದೇಶ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಮಮತ ಶಿವಪೂಜಿ, ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾ ಧೀಶರಾದ ಸಚಿನ್‌ಕುಮಾರ್‌ ಶಿವಪೂಜಿ, ಸರ್ಕಲ್‌ ಇನ್ಸ್‌ ಪೆಕ್ಟರ್‌ ಶ್ರೀಕಾಂತ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಅದರ್ಶ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಭಗವಾನ್‌ ಬುದ್ಧ ಮಹಾ ವಿದ್ಯಾಲಯದ ಅಧ್ಯಕ್ಷ ಯಮದೂರು ಸಿದ್ದರಾಜು, ತಾಲೂಕು ವೈದ್ಯಾ ಕಾರಿ ಡಾ.ವೀರಭದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next