Advertisement
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಆಯೋಜಿಸಿದ್ದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಸುತ್ತ ಕಣ್ಣು ಆಯಿಸಿದಷ್ಟು ದೂರವೂ ಹಬ್ಬಿರುವ ಹಸಿರು ಅರಣ್ಯದ ನಡುವೆ ಒಂದೆಡೆ ಸೇರಿ ತೇಜಸ್ವಿ ಕೃತಿಗಳ ಕೆಲ ಸಾಲುಗಳನ್ನು ಓದಿದರು.ಕೀಟತಜ್ಞರಾದ ಮೂಡಿಗೆರೆಯ ಅವಿನಾಶ್ ಮಾತನಾಡಿ, ಪರಿಸರದ ಬಗ್ಗೆ ಬೆರಗು ಮತ್ತು ಪರಿಸರದ ಉಳಿವಿನ ಮಹತ್ವವನ್ನು ತೇಜಸ್ವಿ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ತೇಜಸ್ವಿ ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗ ಸೃಷ್ಠಿಯಾಗಿ ಓದಿನ ರುಚಿ ಎಲ್ಲರಲ್ಲೂ ಮೂಡುತ್ತಿದೆ. ಪರಿಸರ, ಜೀವಸಂಕುಲ, ಬಾಹ್ಯಾಕಾಶ, ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.
Related Articles
Advertisement
ಈ ಸಂದರ್ಭದಲ್ಲಿ ಕೀಟ ತಜ್ಞರಾದ ಅವಿನಾಶ್, ತೇಜಸ್ವಿ ಅವರ ಒಡನಾಡಿ ಹಾಗೂ ಕಲಾವಿದರಾದ ಬಾಪುದಿನೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಿಲಾಷ್, ಚಂದನ್, ಸಿಬ್ಬಂದಿ ಭವಿತ್ ಹಾಗೂ ರಾಜ್ಯದ ವಿವಿದೆಡೆಯಿಂದ ಆಗಮಿಸಿದ 40 ಕ್ಕೂ ಹೆಚ್ಚು ಚಾರಣಿಗರು ಇದ್ದರು.