Advertisement

ಅಪರೂಪದ ತ್ರಿವಳಿ ಸಂಗಮ

03:50 AM Mar 17, 2017 | |

ಕಟೀಲು ಮೇಳದ ಪ್ರಮುಖ ಭಾಗವತ ಪಟ್ಲ ಸತೀಶ ಶೆಟ್ಟಿ, ಬಡಗಿನ ಸಾಲಿಗ್ರಾಮ ಮೇಳದ ಭಾಗವತ ರಾಘವೇಂದ್ರ ಮಯ್ಯ ಮತ್ತು ಪೆರ್ಡೂರು ಮೇಳದ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಈ ಮೂವರು ಒಂದೇ ವೇದಿಕೆಯಲ್ಲಿ ಗಾನ ರಸಧಾರೆ ಹರಿಸಿದ ಗಾನವೈಭವ  ಇತ್ತೀಚೆಗೆ ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಹೊಟೇಲ್‌ ಉದ್ಯಮಿ ರಾಘವೇಂದ್ರ ಹೆಬ್ಟಾರ್‌ ಅವರ ಪುತ್ರ ಶಶಿಧರನ ಬ್ರಹ್ಮೋಪದೇಶ ಪ್ರಯುಕ್ತ ನಡೆಯಿತು.

Advertisement

ಈ ತ್ರಿವಳಿ ಸಂಗಮ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಯ್ದ ಪ್ರಸಂಗಗಳ ಅತ್ಯುತ್ತಮ ಪದ್ಯಗಳ ಗಾನ- ನಿನಾದ ಸವಿದು ಪುಳಕಿತರಾದರು. ದೇವತಾ ಪ್ರಾರ್ಥನೆಯಿಂದ ಆರಂಭಗೊಂಡು ಶೃಂಗಾರ, ಹಾಸ್ಯ, ವೀರ, ಕರುಣ ಮುಂತಾದ ರಸಗಳ ಪದಗಳು ಮೂವರು ಭಾಗವತರ ಕಂಚಿನ ಕಂಠದಿಂದ ಅದ್ಭುತವಾಗಿ ಮೂಡಿಬಂದವು. ಕೆಲವೊಂದು ಪದ್ಯಗಳನ್ನು ಮೂವರು ದ್ವಂದ್ವವಾಗಿ ಹಾಡಿ ಪ್ರೇಕ್ಷಕರ ಮನರಂಜಿಸಿದರು. 

ಈ ಕಾರ್ಯಕ್ರಮದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಪದ್ಮನಾಭ ಉಪಾಧ್ಯ, ಪರಮೇಶ್ವರ ಭಂಡಾರಿ ಕರ್ಕಿ, ಕೋಟ ಶಿವಾನಂದ, ಸುನಿಲ್‌ ಭಂಡಾರಿ, ಶ್ರೀನಿವಾಸ್‌ ಪ್ರಭು ಉತ್ತಮವಾಗಿ ಚೆಂಡೆ-ಮದ್ದಲೆ ಹಿಮ್ಮೇಳದ ಝೆಂಕಾರ ಹರಿಸಿದರು. ವಾದಿರಾಜ ಕಲ್ಲೂರಾಯರ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ನೀಡಿತು. 

ರಾಜೇಶ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next