Advertisement

ಪಂಚವಟಿಯ ಅಪರೂಪದ ಸೂರ್ಯಗ್ರಹಣ ದೃಶ್ಯ

09:38 PM Nov 09, 2019 | Team Udayavani |

ಶ್ರೀರಾಮ, ಸೀತೆ, ಲಕ್ಷ್ಮಣರು ವನವಾಸದಲ್ಲಿದ್ದ ವೇಳೆ, ಪಂಚವಟಿಯಲ್ಲಿ ಸಂಭವಿಸಿದ ಸಂಪೂರ್ಣ ಸೂರ್ಯ ಗ್ರಹಣದ ವಿವರ ಇಂದಿಗೂ ಖಗೋಳ ವಿಜ್ಞಾನದ ಲೆಕ್ಕಾಚಾರಕ್ಕೆ ಒಂದು ಆಧಾರ. ಅಂದು ಮಧ್ಯಾಹ್ನದ ವೇಳೆಯಲ್ಲಿ ಕಾಣುತ್ತಿದ್ದ ಅಪರೂಪದ ಗ್ರಹಗಳ ವಿವರವನ್ನು ವಾಲ್ಮೀಕಿಗಳು ಹೀಗೆ ಕೊಡುತ್ತಾರೆ: “ರಾಮನೊಂದಿಗೆ ಯುದ್ಧ ಮಾಡಲು ಖರ ತನ್ನ ಸೈನ್ಯವನ್ನು ತಂದಾಗ, ಸಂಧ್ಯಾಕಾಲದ ಕೆಂಪುವರ್ಣವು ಎಲ್ಲೆಡೆ ಹರಡುತ್ತಲಿತ್ತು’; “ಕೆಂಪು ವರ್ಣದ ಮೂಲೆಗಳಿದ್ದ ಕಪ್ಪು ವರ್ಣದ ಚಕ್ರದಿಂದ ಸೂರ್ಯ ಮರೆಯಾಗಿದ್ದ, ಹಗಲಿನ ಸಮಯವಾಗಿದ್ದರೂ, ಸಂಧ್ಯಾಕಾಲದಂತೆ ತೋರತೊಡಗಿತು’; “ಸೂರ್ಯನು ರಾಹುಗ್ರಸ್ತನಾಗಿದ್ದ ರಿಂದ ತನ್ನ ಬೆಳಕನ್ನೂ ಹಾಗೂ ಪ್ರಖರತೆಯನ್ನೂ ಕಳೆದುಕೊಂಡಿದ್ದ’; “ಪಶುಪಕ್ಷಿಗಳು ರಾತ್ರಿಯಾದಂತೆ ಶಬ್ದ ಮಾಡುತ್ತಿದ್ದವು’ - ಇವೆಲ್ಲವೂ ಸತ್ಯ ಸಂಗತಿ ಎನ್ನುವುದು ಈಗ ಪ್ಲಾನೆಟೋರಿಯಂ ತಂತ್ರಾಂಶದ ಸಹಾಯದಿಂದ ನಡೆದಿರುವ ಸಂಶೋಧನೆಯಿಂದ ಸಿದ್ಧವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next