Advertisement

ಅಪರೂಪದ ಪುರಾತನ ನಾಗಕನ್ನಿಕಾ ಸನ್ನಿಧಿ; ಪುರಾತನ ದೇವಾಲಯ ಅವನತಿ ಅಂಚಿನಲ್ಲಿ

05:37 PM Jun 25, 2023 | Team Udayavani |

ದೋಟಿಹಾಳ: ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮಾಡಬೇಕಾದ ತಾಲೂಕ ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ನಿರ್ಲಕ್ಷದಿಂದ ಅಪರೂಪದ ಪುರಾತನ ದೇವಾಲಯಯ ಅವನತಿ ಅಂಚಿನತ್ತ ಸಾಗಿದೆ.

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗೋತಗಿ (ಗೋವರ್ತಿ)ಗ್ರಾಮದ ನಾಗಕನ್ನಿಕಾ ದೇವಾಲಯ 11-12 ಶತಮಾನದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಮಾಹಿತಿ ಇದೆ. ಆದರೇ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರ್ಪಡೆ ಆಗದ ಹಿನ್ನೆಲೆಯಲ್ಲಿ. ತಾಲೂಕ ಆಡಳಿತ ಈ ದೇವಾಲಯ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಸಾವಿರಾರೂ ವರ್ಷಗಳಿಂದ ಅಭಿವೃದ್ಧಿ ಕಾಣದೆ ಈ ಪುರಾತನ ದೇವಾಲಯ ಸದ್ಯ ಕಣ್ಮರೆಯಾಗುವ ಹಂತಕ್ಕೆ ಬಂದಿದೆ.

ಸಾಮಾನ್ಯವಾಗಿ ಎಲ್ಲಾ ಕಡೆಯ ದೇವಾಲಯಗಳಲ್ಲಿ ನಾಗಕೆತ್ತನೆ ಕಲ್ಲುಗಳು ಮತ್ತು ಮೂರ್ತಿಗಳು ಸಿಗುತ್ತವೆ. ಆದರೆ ನಾಗ ಕನ್ಯೆ ಎಂಬ ದೇವಸ್ಥಾನ ಈ ಗ್ರಾಮದಲ್ಲಿ ಕಂಡು ಬರುತ್ತಿರುವುದು ಒಂದು ವಿಶೇಷ.

ಗೋತಗಿ ಗ್ರಾಮದಲ್ಲಿ ಇರುವ ನಾಗ ಕನ್ಯೆ ದೇವಾಲಯ ಅಪರೂಪದ ದೇವಾಲಯ. ಇಂಥಹ ದೇವಾಲಯ ರ‍್ಯಾಜದಲ್ಲಿ ಇಲ್ಲಿ ಕಂಡು ಬರುವದಿಲ್ಲ ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಅಪರೂಪದ ನಾಗಕನ್ನಿಕಾ ದೇವಾಲಯವನ್ನು ಉಳಿಸಿ ಬೆಳೆಸಬೇಕೆಂಬುವುದೇ ಭಕ್ತರ ಕಳಕಳಿಯಾಗಿದೆ.

Advertisement

ಈ ದೇವಾಲಯದಲ್ಲಿ ಎರಡು ಶಾಸನಗಳು ಇವೆ. ಆ ಶಾಸನದಲ್ಲಿ ಈ ದೇವಸ್ಥಾನವನ್ನು ಕಲ್ಯಾಣಿ ಚಾಲಿಕ್ಯರ ರಾಣಿ ಪದ್ಮಾವತಿಯವರು ನಿರ್ಮಾಸಿದಾರೆ. ಇದು ಕಲ್ಲಿನಾಥ ದೇವಾಲಯ ಎಂದು ಹೇಳುತ್ತಾರೆ. ಈ ದೇವಾಲಯಕ್ಕೆ ರಾಣಿ ಭೂದಾನ ನೀಡಿದ ಬಗ್ಗೆ ಶಾಸನಗಳು ಇವೆ. ಆದರೆ ಸ್ಥಳಿಯರು ಹೇಳುವ ಪ್ರಕಾರ ಈ ಸ್ಥಳದಲ್ಲಿ ದೇವಕನ್ನಿಕೆ ಮತ್ತು ನಾಗಕನ್ನಿಕೆ ದೇವಾಲಯದ ಜತೆಗೆ ಇನ್ನೊಂದು ದೇವಾಲಯ ಮಣ್ಣಿನಲ್ಲಿ ಮುಚ್ಚಿ ಹೋಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ದೇವಾಲಯ ಕಲ್ಲಿನಾಥನ ದೇವಾಲಯ ಆಗಿರಬಹುದು. ಇದನ್ನು ಉತ್ಕನನ ಮಾಡಿದರೆ ಮಾತ್ರ ಇನ್ನು ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಕಾರ್ಯಕ್ಕೆ ಪುರಾತನ ಇಲಾಖೆ ಮುಂದಾಗಬೇಕು ಹಾಗಾದರೆ ಮಾತ್ರ ಸ್ಪಷ್ಟ ಮಾಹಿತಿ ಸಿಗುತ್ತದೆ. ಸದ್ಯ ಈ ದೇವಾಲಯ ಅನೇಕ ಪುಸ್ತಕಗಳಲ್ಲಿ ಮತ್ತು ಲೇಖನಗಳಲ್ಲಿ ನಾಗಕನ್ನಿಕಾ ದೇವಾಲಯ ಎಂದೇ ಹೆಸರು ಪಡೆದಿದೆ.

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಈ ಗ್ರಾಮದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾಗಿವೆ. ರಾಮಲಿಂಗ ದೇವಾಲಯ, ದೇವಕನ್ನಿಕೆ ಮತ್ತು ನಾಗಕನ್ಯೆಕೆ ದೇವಾಲಯ. ಒಂದೇ ಕಲ್ಲಿನಲ್ಲಿ ಇಡೀ ಬಾವಿಯನ್ನು ನಿರ್ಮಾಣ ಮಾಡಿರುವುದು ಹಾಗೂ ಗ್ರಾಮದ ಹೊರಗೆ ಪುಷ್ಕರಣಿ ನಿರ್ಮಾಣ ಮಾಡಿರುವುದು ಸದ್ಯ ಗ್ರಾಮದಲ್ಲಿ ಕಂಡು ಬರುತ್ತಿದೆ. ಆದರೇ ಶಾಸನದಲ್ಲಿ ಇರುವ ಕಲ್ಲಿನಾಥ ದೇವಾಲಯ ಮಾತ್ರ ಯಾವುದು ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಮಸ್ಥರು ಹೇಳುವ ಪ್ರಕಾರ ಈ ದೇವಾಲಯ ಮಣ್ಣಿ ಮುಚ್ಚಿ ಹೋಗಿದೆಯೋ ಗೊತ್ತಿಲ್ಲ. ಆದರೇ ಇದರ ಬಗ್ಗೆ ಪುರಾತನ ಇಲಾಖೆಯವರು ಹೆಚ್ಚಿನ ಸಂಶೋಧನೆ ಮಾಡಿದರೆ. ಇಲ್ಲಿಯ ಪರಂಪರೆಯ ಬಗ್ಗೆ ನಾಡಿನ ಜನರಿಗೆ ಮತ್ತು ಗ್ರಾಮಸ್ಥರಿಗೆ ತಿಳಿಯುತ್ತದೆ. ಇಂಥಹ ಅಪರೂಪದ ಪುರಾತನ ದೇವಾಲಯವನು ಮತ್ತು ನಮ್ಮ ಹಳೆ ಸಂಪ್ರದಾಯ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಈ ದೇವಾಲಯ ಮುಜರಾಯಿ ಇಲಾಖೆಯಲ್ಲಿ ಇಲ್ಲ. ಹೀಗಾಗಿ ಅಭಿವೃದ್ಧಿ ಹೊಂದಿಲ್ಲ. ನಮ್ಮ ಗ್ರಾಮದ ಮಧ್ಯ ಭಾಗದಲ್ಲಿ ದೇವಕನ್ಯೆಕೆ ಮತ್ತು ನಾಗಕನ್ಯೆಕೆ ದೇವಾಲಯಗಳು ಇವೆ. ಇದರ ಜೊತೆಗೆ ಇನ್ನೊಂದು ದೇವಾಲಯ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಹೀಗಿರುವುದು ನಾಗಕನ್ನಿಕಾ ದೇವಸ್ಥಾನ. ನಾವು ಕೇಳಿದ ಮಾತ್ರ ನಾಗಕನ್ನಿಕಾ ದೇವಸ್ಥಾನ ರಾಜ್ಯದಲ್ಲಿ ಎಲ್ಲಿ ಇಲ್ಲ. ಈ ದೇವಾಲಯ ಒಂದೇ..
-ರವೀಂದ್ರ ದೇಸಾಯಿ. ಗೋತಗಿ ಗ್ರಾಮಸ್ಥ.

ಅಪರೂಪದ ಪುರಾತನ ದೇವಾಲಯಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋತಗಿ ಗ್ರಾಮದ ನಾಗಕನ್ಯೆಕಾ ದೇವಾಲಯದ ಬಗ್ಗೆ ಮಾಹಿತಿ ಪಡೆದು. ಅಲ್ಲಿ ಇನ್ನಷ್ಟು ಸಂಶೋಧನೆ ಮಾಡಲು ಪುರಾತನ ಇಲಾಖೆ ಮಾಹಿತಿ ನೀಡುತ್ತೇನೆ. ಹಾಗೂ ತೊಟ್ಟಲಬಾವಿ(ಪುಷ್ಕರಣಿ)ಯಲ್ಲಿ ನೀರು, ಹೂಳೆತ್ತುವ ಕೆಲಸವನ್ನು ತಾಪಂ ಇಲಾಖೆ ಸೂಕ್ತ ಕ್ರಮಕೈಗೊಳ್ಳು ಸೂಚನೆ ನೀಡುತ್ತೇನೆ.
-ಕೆ.ರಾಘವೇಂದ್ರರಾವ್. ತಹಶೀಲ್ದಾರ್ ಕುಷ್ಟಗಿ.

ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next