Advertisement
ಗಂಗೊಳ್ಳಿಯಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆಗೆ, ಮನೆಗಳಿಗೆ ನುಗ್ಗಿ ಸಮಸ್ಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಹೆಚ್ಚಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಇರುವ ಚರಂಡಿಗಳನ್ನು ನಿರ್ವಹಣೆ ಮಾಡುವಲ್ಲಿ ಸ್ಥಳೀಯಾಡಳಿತ ವಿಫಲವಾಗಿರುವುದು ಮಳೆಗಾಲದಲ್ಲಿ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ.
Related Articles
ಮ್ಯಾಂಗನೀಸ್ ರಸ್ತೆ ಬಳಿಯಿಂದ ಚರ್ಚ್ ರಸ್ತೆ ಮೂಲಕ ಮತ್ತು ಶ್ರೀ ವಿಜಯ ವಿಠಲ ಮಂಟಪದ ಬಳಿಯಿಂದ ಮುಖ್ಯರಸ್ತೆ ಮೂಲಕ ಚರ್ಚ್ ರಸ್ತೆಗೆ ಸಾಗಿ ದುರ್ಗಿಕೇರಿ ಚರಂಡಿ ಯಲ್ಲಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆಯಿದ್ದು, ಈ ಚರಂಡಿ ಹಾಗೂ ಅರೆಕಲ್ಲು ಪ್ರದೇಶದ ಮೂಲಕ ಸಾಗುವ ಚರಂಡಿಯು ಅತಿಕ್ರಮಣಗೊಂಡು ಚರಂಡಿ ಚಿಕ್ಕದಾಗುತ್ತಿದೆ. ಚರಂಡಿಯಲ್ಲಿ ಮಣ್ಣು ರಾಶಿ ಹಾಕಲಾಗಿದ್ದು, ಮಳೆ ನೀರು ಹರಿದು ಹೋಗುವುದು ಕಷ್ಟ. ಅದಲ್ಲದೆ ಅಪಾರ ಪ್ರಮಾಣದ ತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ದೊಡ್ಡಹಿತ್ಲು ಚರಂಡಿಯಲ್ಲಿ ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದಷ್ಟು ತ್ಯಾಜ್ಯ ತುಂಬಿದೆ.
Advertisement
ಇಂದು ಸಭೆಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಗಾರು ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು ಮೇ 26 ರಂದು ಗ್ರಾ.ಪಂ. ಕಚೇರಿಯಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರಂಡಿ ಹೂಳೆತ್ತುವ ಬಗ್ಗೆ,ಗಿಡ ಗಂಟಿಗಳ ತೆರವು ಬಗ್ಗೆ ಚರ್ಚಿಸಲಾಗುವುದು.
–ವಾಸುದೇವ ಶೇರುಗಾರ್,
ಗಂಗೊಳ್ಳಿ ಗ್ರಾ.ಪಂ. ಕಾರ್ಯದರ್ಶಿ