Advertisement
ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಿಂಗ್ ರೋಡ್ ರಸ್ತೆಗೆ ಡಾ.ಪುನೀತ್ ಹೆಸರು ನಾಮಕರಣ ಮಾಡಿ ಮಾತನಾಡಿದ ಅವರು, ಸ್ಮಾರಕದಲ್ಲಿ ಡಾ|ರಾಜ್, ಪುನೀತ್ ಜೀವನ ಸಾಧನೆ ಜನರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದರು.
ಸಚಿವ ಆರ್.ಅಶೋಕ್ ಮಾತನಾಡಿ, ನಾಯಂಡ ಹಳ್ಳಿಯಿಂದ ಜೆ.ಪಿ.ನಗರದ ವೇಗಾಸಿಟಿ ವರೆಗಿನ 12 ಕಿ.ಮೀ ವರೆಗಿನ ರಸ್ತೆಗೆ ಡಾ.ಪುನೀತ್ ರಾಜ್ ಕುಮಾರ್ ಹೆಸರು ಇಟ್ಟಿರುವುದು ಹೆಮ್ಮೆ ಆಗುತ್ತದೆ. ಇದಕ್ಕೆ ಸಿಎಂ ಬೊಮ್ಮಾಯಿ ಕಾರಣರಾಗಿದ್ದಾರೆ ಎಂದರು.
Related Articles
Advertisement
ಕಾರ್ಯಮದಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಕೃಷ್ಣಪ್ಪ, ಉದಯ್ ಗರುಡಾಚಾರ್, ನಟ ಅಭಿಷೇಕ್ ಅಂಬರೀಷ್, ರಾಕ್‌ಲೈನ್ ವೆಂಕಟೇಶ್, ಸುಂದರ್‌ರಾಜ್ ಇತರರಿದ್ದರು.
ಅಶೋಕ್ ಒಬ್ಬ ಛಲಗಾರ:ಕಂದಾಯ ಸಚಿವ ಒಬ್ನ ಛಲಗಾರ. ಮನಸ್ಸು ಮಾಡಿದರೆ ಆ ಕೆಲಸವನ್ನು ಮಾಡದೇ ಬಿಡಲಾರ. ಯಾವುದೇ ಕೆಲಸ ನೀಡಿದರೂ ಅಚ್ಚುಕಟ್ಟಾಗಿ ಮಾಡದೆ ವಿರಮಿಸುದಿಲ್ಲ ಎಂದು ಸಿಎಂ ಬೊಮ್ಮಾಯಿ ಶ್ಲಾಘಿಸಿದ್ದರು. ಕಂದಾಯ ಇಲಾಖೆಯಿಂದ ಹಿಂದೆಂದೂ ಆಗದಂತಹ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಸೇರಿದಂತೆ ಹಲವು ಜನಮೆಚ್ಚುವ ಕಾರ್ಯಕ್ರಮ ರೂಪಿಸಿದ ಹರಿಕಾರ ಎಂದರು. ಸತತ 6 ಬಾರಿಗೆ ಗೆದಿದ್ದಾರೆ. ಆರು ಬಾರಿ ಗೆಲವು ಸುಲಭವಲ್ಲ.ಪದ್ಮನಾಭ ಕ್ಷೇತ್ರದಲ್ಲಿ ಉದ್ಯಾನವನ ಸೇರಿದಂತೆ ಬಹಳಷ್ಟು ಉತ್ತಮ ಕೆಲಸ ಮಾಡಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.