Advertisement
ಅಲ್ಪಾವಧಿಯಲ್ಲಿ ತಕ್ಷಣಕ್ಕೆ ಸಮಸ್ಯೆ ಬಗೆಹರಿಸುವ ಸಂಬಂಧ ಪಿಎಂಜಿಕೆವೈ ಮೂಲಕ ನಗದು ಮತ್ತು ಆಹಾರ ನೆರವು ನೀಡುತ್ತಿರುವುದು, ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ ತೆರಿಗೆ ರಿಯಾಯಿತಿ, ಇಪಿಎಫ್ ಮೂಲಕ ಹೆಚ್ಚಿನ ಹಣ ಜನರ ಕೈಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ತೆರಿಗೆ ಸಲ್ಲಿಕೆಯ ಗಡುವಿನ ಸಡಿಲಿಕೆ,ಹೊಸ ಚಟುವಟಿಕೆಗಳ ಸ್ಥಗಿತ ಮತ್ತು ಐಬಿಸಿ ನಡಾವಳಿ ಗಳಿಂದ ಕೋವಿಡ್-19 ಸಂಬಂಧಿತ ಸಾಲವನ್ನು ಹೊರಗಿಟ್ಟು ವ್ಯಕ್ತಿ ಮತ್ತು ಉದ್ಯಮಗಳಿಗೆ ತಕ್ಷಣದ ಪರಿಹಾರ ನೀಡಲಾಗಿದೆ.
ಭೂಮಿಯನ್ನು ಹೂಡಿಕೆ ಮಾಡಲು ಸಿದ್ಧ ಮಾಹಿತಿ ಯನ್ನು ಒದಗಿಸುವ ಪೋರ್ಟಲ್, ಅಂತಹ ಮಾರ್ಗದರ್ಶನಕ್ಕೆ ಬಹಳ ಉಪಯುಕ್ತವಾಗಿದೆ.
Related Articles
ಗೀಡಾದ ಈ ವಲಯಕ್ಕೆ ಸಹಾಯ ಮಾಡಲು ಹಲವಾರು ಕ್ರಮಗಳನ್ನು ಒಳಗೊಂಡಿರುವುದು ಸಂತೋಷ ತಂದಿದೆ. ಎಂಎಸ್‌ಎಂಇಗಳ ಪುನರ್ ವ್ಯಾಖ್ಯಾನದಲ್ಲಿ
ಪ್ರಸ್ತಾವಿತ ವಹಿವಾಟು ಮಿತಿಗಳನ್ನು ಮರುಪರಿಶೀಲಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ. ಏಕೆಂದರೆ ಈ ಮಿತಿಗಳು ತೀರಾ ಕಡಿಮೆ ಎಂದು ಪರಿಗಣಿಸಲಾಗಿದ್ದು, ಇದರಿಂದ ಈ ಘಟಕಗಳು ಬೆಳೆಯಲು ಪ್ರೊತ್ಸಾಹಿಸಿದಂತಾಗುವುದಿಲ್ಲ.
Advertisement
ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗುವ ವಲಸಿಗರು ಜೀವನೋಪಾಯ ಕಂಡುಕೊಳ್ಳಲು ಎಂನ ರೇಗಾದ ಹಂಚಿಕೆಯನ್ನು ಸಹ ಹೆಚ್ಚಿಸಲಾಗಿದೆ. ಇಡೀಪ್ಯಾಕೇಜ್ ಜಾರಿಗೆ ಬರುತ್ತಿದ್ದಂತೆ ಕ್ರಮೇಣ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವನ್ನು ಉದ್ಯಮ ಹೊಂದಿದೆ. ವಲಸೆ ಕಾರ್ಮಿಕರಿಗೆ ಬಾಡಿಗೆ
ವಸತಿ ಯೋಜನೆಯ ಘೋಷಣೆಯು ದೀರ್ಘಾವಧಿ ಯಲ್ಲಿ ಅವರ ಸ್ಥಿತಿ ಸುಧಾರಣೆಯಲ್ಲಿ ಅರ್ಥಪೂರ್ಣ ಬದಲಾವಣೆಗೆ ಕಾರಣವಾಗ ಬಹುದು. ಕೆಲವೊಮ್ಮೆ ಉದ್ಯಮವು ಅನೇಕ ರಚನಾತ್ಮಕ ಸುಧಾರಣೆಗಳನ್ನು ಬೇಡುತ್ತದೆ. ಅವುಗಳನ್ನು ಸಮಯಕ್ಕನುಗುಣವಾಗಿ ಕಾರ್ಯಗತಗೊಳಿಸಿದರೆ, ಆರ್ಥಿಕತೆಯ ಸ್ಪರ್ಧಾತ್ಮಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆರ್ಥಿಕತೆಯು ಚೇತರಿಸಿಕೊಂಡಾಗ ಅದು ಶಕ್ತಿಯುತವಾಗಿರುತ್ತದೆ ಮತ್ತು ಹೆಚ್ಚು
ಸ್ಪರ್ಧಾತ್ಮಕವಾಗಿರುತ್ತದೆ. ಇದಲ್ಲದೆ, 20 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ವೆಚ್ಚ ಮಾಡುವುದರಿಂದ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ
ಬೀರುತ್ತದೆ. 2020-21ನೇ ಹಣಕಾಸು ವರ್ಷದಲ್ಲಿ ಅಂದಾಜು ಕೊರತೆಯ ಪರಿಣಾಮದೊಂದಿಗೆ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗದಂತೆ ಇದನ್ನು
ಸಾಧಿಸುವಲ್ಲಿ ಯಶಸ್ವಿಯಾಗಿರುವ ಸರ್ಕಾರ ಮತ್ತು ಅದರ ನೀತಿ ನಿರೂಪಕರಿಗೆ ಇದರ ಶ್ರೇಯ ಸಲ್ಲಬೇಕು. ಇದು ಭವಿಷ್ಯದಲ್ಲಿ ಉದ್ಭವಿಸಬಹುದಾದ ಅನಿರೀಕ್ಷಿತ
ಕ್ರಮಗಳಿಗೆ ಹೆಚ್ಚುವರಿ ಅವಕಾಶವನ್ನು ನೀಡುತ್ತದೆ. ● ಚಂದ್ರಜಿತ್ ಬ್ಯಾನರ್ಜಿ, ಮಹಾನಿರ್ದೇಶಕರು, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)