Advertisement

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

01:04 AM Jun 24, 2024 | Team Udayavani |

ಮಂಗಳೂರು: ಚುನಾವಣೆ ಹೊತ್ತಲ್ಲಿ ಯುದೊœàನ್ಮಾದ ಸ್ಥಿತಿಯಲ್ಲಿದ್ದ ಕರಾವಳಿ ಭಾಗದ “ಸೋಶಿಯಲ್‌ ಮೀಡಿಯಾ ವಾರ್‌ ರೂಂ’ಗಳು ಫ‌ಲಿತಾಂಶ ಹೊರಬಿದ್ದ ಬಳಿಕವೂ ತಣ್ಣಗಾಗಿಲ್ಲ. ಬದಲಾಗಿ, ಕರಾವಳಿ ಭಾಗದಲ್ಲಿ ರಾಜಕೀಯ ಕೆಸರೆರಚಾಟ, ಕೋಮು ಪ್ರಚೋದನೆ, ವೈಯಕ್ತಿಕ ದ್ವೇಷ ಮೊದಲಾದವುಗಳನ್ನು ಒಳಗೊಂಡ
ಪೋಸ್ಟ್‌ಗಳ ಭರಾಟೆ ಹೆಚ್ಚಾಗಿದ್ದು, ಇದರ ನಿಯಂತ್ರಣ ಈಗ ಪೊಲೀಸರಿಗೆ ತಲೆನೋವು ತರಿಸಿದೆ.

Advertisement

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು, ಕಾಮೆಂಟ್‌ಗಳು,ಆಡಿಯೋ ತುಣುಕುಗಳು ಸಮಾಜದಸ್ವಾಸ್ಥ್ಯ ಕೆಡಿಸುವ ಅಪಾಯ ಇರುವುದ ರಿಂದ ಇಂತಹ ಚಟುವಟಿಕೆಗಳ ಮೇಲೆನಿರಂತರ ನಿಗಾ ಇಡಲು ಎಲ್ಲ ಠಾಣೆ ಗಳ ಪೊಲೀಸರಿಗೆ ಉನ್ನತ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೆಲವು ರಾಜಕೀಯ, ಧಾರ್ಮಿಕ, ಮೂಲಭೂತವಾದಿ ಸಂಘಟನೆಗಳು ತಮ್ಮ ದ್ವೇಷಪೂರಿತ ಸಂದೇಶಗಳನ್ನು ಪಸರಲು ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಮಾಡಿಕೊಂಡಿವೆ. ಇಂತಹ ಪೋಸ್ಟ್‌ಗಳು ಕೆಲವು ಘಟನೆ, ವೈಷಮ್ಯಗಳಿಗೆ ಪ್ರಚೋದನೆ ನೀಡುವಂತಿವೆ. ರಾಜಕೀಯ ಪಕ್ಷಗಳ ಕೆಲವು ಮುಖಂಡರು ಕೂಡ ತಮ್ಮ “ಚೇಲಾ’ಗಳ ಮೂಲಕ ಸಂದೇಶಗಳನ್ನು ಹಾಕಿಸುವುದು, ವೈರಲ್‌ ಮಾಡಿಸುವುದು ಮೊದಲಾದವು ಗಳನ್ನು ಮಾಡುತ್ತಿದ್ದಾರೆ. ಇದು ಕೂಡ ಗಮನಕ್ಕೆ ಬಂದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೀ ವರ್ಡ್‌ ಬಳಕೆ
ಸಮುದಾಯಗಳಿಗೆ ಸಂಬಂಧಿ ಸಿದ ಪೋಸ್ಟ್‌ಗಳ ಸಂದರ್ಭದಲ್ಲಿ ಕೀ ವರ್ಡ್‌ಗಳನ್ನು ಬಳಸುತ್ತಿದ್ದಾರೆ. ಕೆಲವು ಅನಾಮಿಕರಿಂದ ಖಾತೆಗಳು ಸೃಷ್ಟಿಯಾಗಿರುವುದು ಗೊತ್ತಾಗಿದೆ. ನಿರಂತರವಾಗಿ ಆಕ್ಷೇಪಾರ್ಹ ಪೋಸ್ಟ್‌,
ಕಮೆಂಟ್‌ಗಳನ್ನು ಹಾಕುವವರನ್ನು ಕೂಡ ಗುರುತಿಸಿ ನಿಗಾ ವಹಿಸ ಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ಕಣ್ಗಾವಲು ಇಡಲು ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ “ಸೋಶಿ ಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌’ ಕಾರ್ಯಾಚರಿಸುತ್ತಿದ್ದು, ಇದರ ಮೂಲಕ ಈಗಾಗಲೇ ಈ ಪೈಕಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿಸಿ ಕೆಮರಾ ಫ‌ೂಟೇಜ್‌ ವೈರಲ್‌
ಯಾವುದೇ ಘಟನೆ ನಡೆದ ಕೂಡಲೇ ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ಅಪ್‌ಲೋಡ್‌ ಆಗಿ ವೈರಲ್‌ ಆಗುತ್ತಿರುವುದು ಕೂಡ ಪೊಲೀಸರಿಗೆ ಸವಾಲಾಗುತ್ತಿದೆ. ಸಿಸಿಟಿವಿ ಫ‌ೂಟೇಜ್‌ಗಳು ಜಾಲತಾಣಗಳಿಗೆ ಹೋಗುವ ಮೊದಲು ಪೊಲೀಸ್‌ ಇಲಾಖೆಯ ವಶಕ್ಕೆ ಪಡೆಯುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಂಭೀರವಾಗಿ ಪರಿಗಣನೆ
ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಅವಹೇಳನಕಾರಿ ಪೋಸ್ಟ್‌ಗಳು ಸಹಿತ ಆಕ್ಷೇಪಾರ್ಹವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಹ ಹರಿಯಬಿಟ್ಟ ಬಗ್ಗೆ 21 ದೂರುಗಳು ಬಂದಿದ್ದು, ಈ ಪೈಕಿ 12 ಎಫ್ಐಆರ್‌ ದಾಖಲಾಗಿವೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು.
ಪೋಸ್ಟ್‌ಗಳನ್ನು ಫಾರ್ವರ್ಡ್‌ ಮಾಡುವುದರಿಂದ ಅದನ್ನು ಒಪ್ಪಿದಂತೆ ಹಾಗೂ ಬೆಂಬಲಿಸಿದಂತೆ ಆಗುತ್ತದೆ. ಸಾರ್ವಜನಿಕರನ್ನು ವಂಚಿಸುವ, ತಪ್ಪು ಸಾರ್ವಜನಿಕ ಅಭಿಪ್ರಾಯ ರೂಪಿಸುವ, ಆತಂಕ ಮೂಡಿಸುವ ಹಾಗೂ ಅಪರಾಧಗಳನ್ನು ನಡೆಸುವ ಉದ್ದೇಶದಿಂದ ಕೆಲವರು ನಕಲಿ ಸಂದೇಶಗಳನ್ನು ಕೂಡ ಪೋಸ್ಟ್‌ ಮಾಡುತ್ತಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು.
-ಡಾ| ಕೆ. ಅರುಣ್‌, ಎಸ್‌ಪಿ, ಉಡುಪಿ

ಸಂದೇಶ ರವಾನಿಸುವವರ ಮೇಲೆ ನಿಗಾ
ಇತ್ತೀಚೆಗಿನ ಕೆಲವು ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹಾಗೂ ಕೋಮು ಭಾವನೆಯನ್ನು ಪ್ರಚೋದಿಸುವ ಸಂದೇಶಗಳನ್ನು ಹರಿಯಬಿಡಲಾಗುತ್ತಿರುವುದನ್ನು ಗಮನಿಸಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಗರದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವು ಎಫ್ಐಆರ್‌ ದಾಖಲಾಗಿವೆ. ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್‌ ಮಾಡುವುದು, ಫಾರ್ವರ್ಡ್‌ ಮಾಡುವುದು ತಪ್ಪು. ಮುಖ್ಯವಾಗಿ ಕೋಮುಭಾವನೆ ಕೆರಳಿಸುವ ಸಂದೇಶಗಳನ್ನು ರವಾನಿಸುವವರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ.
-ಅನುಪಮ್‌ ಅಗರ್‌ವಾಲ್‌, ಪೊಲೀಸ್‌ ಆಯುಕ್ತರು ಮಂಗಳೂರು

50ಕ್ಕೂ ಅಧಿಕ ಪ್ರಕರಣ
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ, ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸಿದರೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕಳೆದ 1 ವರ್ಷಗಳಲ್ಲಿ 50ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆ. ಕೋಮು ಸಾಮರಸ್ಯ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವಂಥ ಯಾವುದೇ ಪೋಸ್ಟ್‌, ವಾಯ್ಸ ಮೆಸೇಜ್‌ ಮೊದಲಾದವುಗಳನ್ನು ರವಾನಿಸುವವರ ಮೇಲೆ ನಿರಂತರ ನಿಗಾ ಇಡಲಾಗಿದೆ.
-ರಿಷ್ಯಂತ್‌ ಸಿ.ಬಿ. ಎಸ್‌ಪಿ, ದ.ಕ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next