Advertisement

ಅಂಗನವಾಡಿ ಕಾರ್ಯಕರ್ತೆಯರ ಧರಣಿ

03:40 PM Jul 07, 2019 | Suhan S |

ನರಗುಂದ: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿ ಅಂಗನವಾಡಿ ಕೇಂದ್ರಗಳ ಮೇಲೆ ಅನ್ಯಾಯ ಎಸೆಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ಮಿನಿವಿಧಾನಸೌಧ ಎದುರು ಶನಿವಾರ ಧರಣಿ ನಡೆಸಿದರು.

Advertisement

ಎಐಟಿಯುಸಿ ಜಿಲ್ಲಾ ಸಂಚಾಲಕ ಎನ್‌.ಎ. ಖಾಜಿ ಮಾತನಾಡಿ, ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಅಂಗನವಾಡಿ ಕೇಂದ್ರಗಳ ಶ್ರಮ ಸಾಕಷ್ಟಿದೆ. ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿದ ಸರ್ಕಾರದ ಕ್ರಮದಿಂದ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳು 7 ಕೇಂದ್ರಗಳು ಬಾಗಿಲು ಮುಚ್ಚಿವೆ ಎಂದು ಆರೋಪಿಸಿದರು.

ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸದ ಸರ್ಕಾರ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಯಿಂದ ವಂಚಿತ ಆಗುವಂತೆ ಮಾಡುತ್ತಿದೆ. ಹೀಗಿದ್ದರೆ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸಿದ ಎಲ್ಕೆಜಿ, ಯುಕೆಜಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್‌ ತಾಲೂಕು ಅಧ್ಯಕ್ಷೆ ಶಾರದಾ ಹಳೇಮನಿ, ಕಾರ್ಯದರ್ಶಿ ಶಾರದಾ ರೋಣದ, ಚಾಂದಬಿ ಮುಲ್ಲಾನವರ, ಜಿ.ಎಸ್‌.ಬೆಳವಟಗಿ, ಎ.ಬಿ.ಕುರಹಟ್ಟಿ, ಕೆ.ಬಿ.ಪೂಜಾರ, ಎಸ್‌.ಜಿ. ಬಾಗಲಕೋಟಿ, ಆರ್‌.ಎಲ್. ಹುಜರತ್ತಿ, ಎಲ್.ಎಚ್. ಭಜಂತ್ರಿ, ದೇವಕ್ಕ ಮಾಮನಿ, ಭೀಮವ್ವ ನವಲಗುಂದ ಹಾಗೂ ಎಲ್ಲ ಕಾರ್ಯಕರ್ತೆ, ಸಹಾಯಕಿಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next