Advertisement

ರೈತರಿಂದ ಕತ್ತೆಗಳ ಮೆರವಣಿಗೆ

12:44 PM Jan 28, 2020 | Suhan S |

ಆಲಮಟ್ಟಿ: ಕೃ.ಮೇ.ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿರುವ ಗೋವಿಂದ ಕಾರಜೋಳ ಅವರಿಗೆ ಬರಗಾಲದ ಬಗ್ಗೆ ಅರಿವಿದ್ದರೂ ಜಿಲ್ಲೆ ಜನರಿಗೆ ನ್ಯಾಯ ಕೊಡಿಸದಿರುವದು ಅವರ ಇಬ್ಬಂದಿತನ ತೋರಿಸುತ್ತದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಹೇಳಿದರು.

Advertisement

ಶಾಸ್ತ್ರಿ ಜಲಾಶಯ ವ್ಯಾಪ್ತಿ ಎಲ್ಲ ಕಾಲುವೆ ಹಾಗೂ ಕೆರೆ, ಬಾಂದಾರಗಳನ್ನು ತುಂಬಿಸುವಂತೆ ಆಗ್ರಹಿಸಿ ಕಳೆದ 7 ದಿನಗಳಿಂದ ಅಖಂಡ ಕರ್ನಾಟಕ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಸ್ಪಂದಿಸದೇ ಇರುವದರಿಂದ ಸೋಮವಾರ ನಡೆಸಿದ ಕತ್ತೆ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ನ್ಯಾ| ಬಚಾವತ್‌ ನೇತೃತ್ವದ ಒಂದನೇ ಕೃಷ್ಣಾ ನ್ಯಾ ಯಾದಿಕರಣ ರಾಜ್ಯಕ್ಕೆ 734 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಸ್ಪಷ್ಟ ಆದೇಶ ನೀಡಿದ್ದರೂ ಕೂಡ ರಾಜ್ಯ ಸರ್ಕಾರ ನೀರು ಬಳಸಿಕೊಳ್ಳಲು ವಿಫಲವಾಗಿದೆ. ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರ ಸರ್ಕಾರಗಳು ನ್ಯಾಯಾಧಿಕರಣ ನೀಡಿರುವ ನೀರನ್ನು ಬಳಸಿಕೊಂಡು ಇನ್ನೂ ನೀರು ಬೇಕು ಎನ್ನುತ್ತಿವೆ. ಆದರೆ ರಾಜ್ಯ ಸರ್ಕಾರ ತನಗೆ ಲಭ್ಯವಿರುವ ನೀರನ್ನೂ ಬಳಸಿ ಕೊಂಡಿಲ್ಲವಲ್ಲದೇ ಯೋಜನೆಯಿಂದ ಬಾ ಧಿತಗೊಂಡಿರುವ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ. ಎಂ.ಬಿ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಗೆ ನ್ಯಾಯ ಕೊಡಿಸಲು ಹಲವಾರು ಯೋಜನೆ ಹಾಕಿಕೊಂಡು ಅನುಷ್ಠಾನಗೊಳಿಸಿದ್ದಾರೆ. ಅವರ ನಂತರ ಬಂದಿರುವ ಸಚಿವರು ಅಲಿಯಾಬಾದ್‌ ಹಾಗೂ ಸೊಲ್ಲಾಪುರ ರೋಡ್‌ನ‌ ರೈಲ್ವೆ ಕ್ರಾಸಿಂಗ್‌ ದಾಟಿಸಿಲ್ಲ ಎಂದು ಆರೋಪಿಸಿದರು.

ಎರಡು ಜಲಾಶಯಗಳಿಂದ ಬಾಧಿತಗೊಂಡಿರುವ ಅಖಂಡ ವಿಜಯಪುರ ಜಿಲ್ಲೆಗೆ ನ್ಯಾಯ ಕೊಡಿಸಲು ಆಗದ ಜನಪ್ರತಿನಿ ಧಿಗಳು ಬೇಕೆ? ಜಲಾಶಯಗಳಲ್ಲಿ ನೂರಾರು ಟಿಎಂಸಿ ನೀರು ಸಂಗ್ರಹಿಸಿದ್ದರೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬಂದಿರುವದು ನಾಚಿಕೆಪಡುವ ಸಂಗತಿ. ಶಾಸ್ತ್ರಿ ಜಲಾಶಯ ವ್ಯಾಪ್ತಿ ಎಲ್ಲ ಕಾಲುವೆಗಳಿಗೆ ನೀರು ಹರಿಸುವವರೆಗೆ ನಿರಂತರ ಹೋರಾಟ ಮಾಡಲಾಗುತ್ತಿದೆ. ಸೋಮವಾರ ರಾಜ್ಯ ಸರ್ಕಾರ ಹಾಗೂ ಶಾಸಕ, ಸಂಸದರ ಪ್ರತಿರೂಪವಾಗಿ ಕತ್ತೆಗಳ ಮೆರವಣಿಗೆ ನಡೆಸಲಾಗಿದ್ದು ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಎತ್ತಿನ ಗಾಡಿಗಳೊಂದಿಗೆ ಬಾರಕೋಲು ಚಳವಳಿ, ರಾಷ್ಟ್ರೀಯ ಹೆದ್ದಾರಿ 50ನ್ನು ತಡೆದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೂ ಮುಂಚೆ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್ನೆಲ್‌ ಕಚೇರಿವರೆಗೆ ನಡೆದ ಕತ್ತೆ ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ನೀರಾವರಿ ಸಲಹಾ ಸಮಿತಿ ವಿರುದ್ಧ ಘೋಷಣೆಗಳನ್ನು ಕೂಗಿದರು.

Advertisement

ಮೆರವಣಿಗೆಯಲ್ಲಿ ಚನ್ನಬಸಪ್ಪ ಸಿಂಧೂರ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಕೃಷ್ಣಪ್ಪ ಬಮ್ಮರೆಡ್ಡಿ, ಚನ್ನಪ್ಪ ತೋಟದ, ಶ್ರೀಶೈಲ ನಾಗೋಡ ಸೇರಿದಂತೆ ರಬಿನಾಳ, ಇಂಗಳೇಶ್ವರ, ಹೆಬ್ಟಾಳಟ್ಟಿ, ತಳೇವಾಡ, ಹಂಚಿನಾಳ, ಯರನಾಳ, ನಾಗೋಡ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next