Advertisement
5ನೇ ಸಂಸ್ಥೆಅಮೆರಿಕದ ನಾಸಾ, ಚೀನದ ಸಿಎನ್‌ಎಸ್‌ಎ, ಭಾರತದ ಇಸ್ರೋ, ಜಪಾನ್‌ನ ಜಾಕ್ಸಾ ಸರಕಾರಿ ಸಂಸ್ಥೆಗಳು ತಮ್ಮ ನೌಕೆಗಳನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿವೆ. ಸಂಸ್ಥೆಗಳ ಲೆಕ್ಕಾಚಾರದಲ್ಲಿ ನೋಡಿದರೆ ಇಂಟ್ಯೂಟಿವ್ ಮಷಿನ್ 5ನೇ ಸಂಸ್ಥೆ, ಜಗತ್ತಿನ ಮೊದಲ ಖಾಸಗಿ ಸಂಸ್ಥೆಯಾಗಿದೆ. 50 ವರ್ಷಗಳ ಅನಂತರ ಚಂದ್ರನ ಮೇಲಿಳಿದ ಅಮೆರಿಕದ ಮೊದಲ ನೌಕೆಯೂ ಹೌದು. ಹಿಂದೆ 1972ರಲ್ಲಿ ನಾಸಾದ ಅಪೊಲೊ-17 ಚಂದ್ರನ ಮೇಲಿಳಿದಿತ್ತು.
ಒಡಿಸಿಯಸ್ ನೌಕೆ ದಕ್ಷಿಣ ಧ್ರುವಕ್ಕೆ ಸನಿಹದ ಮಾಲಾಪರ್ಟ್-1 ಭಾಗದಲ್ಲಿ ಇಳಿದಿದೆ. ಏನು ಮಾಡಲಿದೆ ?
ಚಂದ್ರನ ದಕ್ಷಿಣ ಧ್ರುವ ಹಲವಾರು ಕುಳಿಗಳಿಂದ ತುಂಬಿಕೊಂಡಿದೆ. ಇಲ್ಲಿ ನೀರಿನ ಗಡ್ಡೆಗಳು ಇರುವ ಕುರುಹುಗಳು ಈ ಹಿಂದೆ ಸಿಕ್ಕಿವೆ. ಈ ನೀರನ್ನು ಕುಡಿಯಲು ಬಳಸಬಹುದು ಅಥವಾ ಭವಿಷ್ಯದಲ್ಲಿ ಹಾರಲಿರುವ ರಾಕೆಟ್‌ಗಳಿಗೆ ಇಂಧನವಾಗಿಯೂ ಬಳಸಬಹುದು ಎಂಬ ಲೆಕ್ಕಾಚಾರವಿದೆ. ಆದ್ದರಿಂದ ಈ ಬಗ್ಗೆ ಜಗತ್ತಿನ ಎಲ್ಲ ದೇಶಗಳು ಬಹಳ ಕುತೂಹಲದಿಂದ ಸಂಶೋಧನೆ ಮಾಡುತ್ತಲೇ ಇವೆ. ಅಂತಹ ಶೋಧವನ್ನು ಒಡಿಸಿಯಸ್
ಮುಂದುವರಿಸಲಿದೆ.
Related Articles
ಇಳಿಯಲು ಒಂದೆರಡು ತಾಸು ಇರುವಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅದನ್ನು ಇಂಟ್ಯೂಟಿವ್ ವಿಜ್ಞಾನಿಗಳು ಬಗೆಹರಿಸಿದರು. ಈ ನೌಕೆಗೆ ಇನ್ನು 7 ದಿನಗಳ ಸಮಯವಿದೆ. ಅನಂತರ ಚಂದ್ರನಲ್ಲಿ ಕತ್ತಲಾವರಿಸುವುದರಿಂದ ನೌಕೆ ತನ್ನ ಕಾರ್ಯಾಚರಣೆ ನಿಲ್ಲಿಸಲಿದೆ.
Advertisement