Advertisement

Narendra Modi: ಮಕ್ಕಳೊಂದಿಗೆ ಮಗುವಾದ ಪ್ರಧಾನಿ

11:37 PM Nov 16, 2023 | Team Udayavani |

ಹೊಸದಿಲ್ಲಿ: ಮಕ್ಕಳನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಗುವೇ ಆಗಿಬಿಡುತ್ತಾರೆ. ಅವರೊಂದಿಗೆ ತಾವು ಮಕ್ಕಳಾಗಿ ಆಡಿ, ನಲಿಯುತ್ತಾರೆ. ಇತ್ತೀಚೆಗೆ ಇಬ್ಬರು ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ಖುಷಿಯಿಂದ ಆಟವಾಡುತ್ತಿರುವ ವೀಡಿಯೋ ಅನ್ನು ಟ್ವಿಟರ್‌(ಎಕ್ಸ್‌)ನಲ್ಲಿ ಬಿಜೆಪಿ ಹಂಚಿಕೊಂಡಿದೆ.

Advertisement

ವೀಡಿಯೋದಲ್ಲಿ ಅವರು, ಇಬ್ಬರು ಮಕ್ಕಳೊಂದಿಗೆ ನಾಣ್ಯ ಬಳಸಿಕೊಂಡು ಉಪಾಯವಾಗಿ ಆಡುವ ಆಟವನ್ನು ಆಡಿದ್ದಾರೆ. ಅಲ್ಲದೇ ಈ ಆಟವನ್ನು ಹೇಗೆ ಆಡುವುದು ಎಂದು ಅವರಿಗೆ ಕಲಿಸುತ್ತಾರೆ. ಸ್ವತಃ ಹಣೆಗೆ ನಾಣ್ಯ ಅಂಟಿಸಿಕೊಂಡು ಮಗುವಿನಂತೆ ಆಟ ಆಡುತ್ತಾರೆ. ವೀಡಿಯೋ ಹಂಚಿಕೊಂಡಿರುವ ಬಿಜೆಪಿ, “ಮೋದಿ ಅವರು ಮಕ್ಕಳೊಂದಿಗೆ ಮಗುವೇ ಆಗಿ ಬಿಡುತ್ತಾರೆ’ ಎಂದು ಬರೆದುಕೊಂಡಿದೆ. ಜುಲೈನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020ರ ಮೂರನೇ ವಾರ್ಷಿಕ ಸಮಾರಂಭದಲ್ಲೂ ಅವರು ಮಕ್ಕಳೊಂದಿಗೆ ಬೆರೆತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next