Advertisement

ಜೋತು ಬಿದ್ದ ವಿದ್ಯುತ್‌ ತಂತಿ

04:34 PM Nov 27, 2021 | Shwetha M |

ಚಡಚಣ: ಹೊರ್ತಿ ಗ್ರಾಮದಲ್ಲಿ ದಲಿತರ ಓಣಿಯ ಪ್ರಭು ಕಾಂಬಳೆ ಅವರ ಮನೆ ಮೇಲೆ ವಿದ್ಯುತ್‌ ತಂತಿಗಳು ಹರಿದಿರುವುದು ಅಲ್ಲಿ ಚಿಕ್ಕ ಚಿಕ್ಕ ಮಕ್ಕಳು ಪ್ರತಿನಿತ್ಯವೂ ಮನೆ ಮೇಲ್ಗಡೆ ಆಟ ಆಡಲು ಮಕ್ಕಳು ದಿನಾಲು ಹೋಗುತ್ತಾರೆ ವಿದ್ಯುತ್‌ ತಂತಿಗಳು ಕೆಳಗಡೆ ಇರುವುದು ತುಂಬಾ ಅಪಾಯ. ಇವರ ಮನೆಯ ಹತ್ತಿರ ಕಂಬದಿಂದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕೊಡಲಾಗಿದೆ.

Advertisement

ಹೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್‌ ಕಂಬು ಬೇರೆ ಕಡೆ ಅಳವಡಿಸಲು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ವಿದ್ಯುತ್‌ ತಂತಿಯಿಂದ ನಮ್ಮ ಕುಟುಂಬದವರಿಗೆ ಅಪಾಯ ಆದರೆ ಇದಕ್ಕೆ ನೇರ ಹೊಣೆ ಕೆಇಬಿ ಅಧಿಕಾರಿಗಳೆ ಎಂದು ಕುಟುಂಬದವರು ಹೇಳಿದ್ದಾರೆ.

ಗ್ರಾಪಂ ಸದಸ್ಯ ಶರಣಬಸು ದೋಣಿಗೆ ಮಾತನಾಡಿ, ದಲಿತರ ಕಾಲೋನಿಯಲ್ಲಿ ಬಹು ದಿನಗಳಿಂದ ಈ ಮನೆಯ ಮಾಳಿಗೆಯ ಮೆಲೆ ವಿದ್ಯುತ್‌ ತಂತಿಗಳು ಹರಡಿಕೊಂಡಿವೆ. ಈ ಕುಟುಂಬದಲ್ಲಿ ಚಿಕ್ಕ ಮಕ್ಕಳು ಭಯಪಡುವಂತಾಗಿದೆ. ಬೇರೆ ಕಡೆ ಕಂಬ ಹಾಕಲು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆ ಅದನ್ನು ಬೇರೆ ಕಡೆ ಅಳವಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next