Advertisement

ನೋಡು ನೋಡುತ್ತಲೆ ಕುಸಿದು ಬಿದ್ದ ಬ್ರಿಡ್ಜ್ : ವಿಡಿಯೋ ಇಲ್ಲಿದೆ ನೋಡಿ

07:19 PM Aug 27, 2021 | Team Udayavani |

ಉತ್ತಾರಾಖಂಡ :  ಡೆಹ್ರಾಡೂನ್-ರಿಷಿಕೇಶ್ ರಸ್ತೆಯ ರಾಣಿ ಪೋಖರಿಯಲ್ಲಿ ಜಖಾನ್ ನದಿಯ ಮೇಲಿನ ಸೇತುವೆಯ ಒಂದು ಭಾಗವು ಭಾರೀ ಮಳೆ ಮತ್ತು ಬಲವಾದ ಪ್ರವಾಹದಿಂದಾಗಿ ಕುಸಿದಿದೆ. ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿರುವ ಸೇತುವೆ ಕುಸಿತದ ವಿಡಿಯೋ ವೈರಲ್ ಆಗುತ್ತಿದೆ.

Advertisement

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆ ಕೆಲವೊಂದು ಅನಾಹುತಗಳನ್ನು ಸೃಷ್ಠಿಸಿದೆ. ಮಳೆಯಿಂದಾಗಿ ಹಲವೆಡೆ ಭೂಕುಸಿತವುಂಟಾಗಿದ್ದು ಹೃಷಿಕೇಶ್-ದೇವಪ್ರಯಾಗ್, ಹೃಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಉತ್ತರಾಖಂಡ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹವಾಮಾನ ಸಹಜ ಸ್ಥಿತಿಗೆ ಬರುವವರೆಗೆ ಈ ಪ್ರದೇಶಗಳಲ್ಲಿ ಓಡಾಡುವುದು ಬೇಡ ಎಂದು ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಮಾಲ್ದೇವತಾ-ಸಹಸ್ರಧಾರ ಲಿಂಕ್ ರಸ್ತೆಯು ಡೆಹ್ರಾಡೂನ್ ನಲ್ಲಿ ನಿರಂತರ ಮಳೆಯಿಂದಾಗಿ ಜಲಾವೃತವಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಉತ್ತರಾಖಂಡದಲ್ಲಿ ಆಗಸ್ಟ್ 29 ರವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆಯನ್ನು ನೀಡಿದೆ.

Advertisement

ಇನ್ನು ಬುಧವಾರದಂದು ಉತ್ತರಾಖಂಡದ ಪೌರಿ ಜಿಲ್ಲೆಯ ಲಾನ್ಸ್‌ಡೌನ್‌ ಮತ್ತು ಜೈಹರಿಕಾಲ್‌ ನಡುವೆ ಕಾರು ಆಳವಾದ ಕಮರಿಗೆ ಬಿದ್ದು ದೆಹಲಿಯ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಪಿಟಿಐ ವರದಿ ಪ್ರಕಾರ, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next