Advertisement

Anganwadi workers; ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಸೀರೆ

12:23 AM Oct 15, 2024 | Team Udayavani |

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರಕಾರ ಸಮವಸ್ತ್ರವಾಗಿ ನೀಡಿದ ಸೀರೆ ಹದಿನೈದು ದಿನಗಳಲ್ಲೇ ನೂಲು ಬಿಟ್ಟಿದ್ದು, ಇದು ತೀರಾ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿದೆ.

Advertisement

ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ “ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ (ಐಸಿಡಿಎಸ್‌) 2024-25ನೇ ಸಾಲಿನಲ್ಲಿ ಸಮವಸ್ತ್ರವಾಗಿ ಸೀರೆ ವಿತರಿಸಿತ್ತು.

ಹದಿನೈದು ದಿನವಾದದಷ್ಟೇ

ಒಂದು ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡರಂತೆ ಒಟ್ಟು ನಾಲ್ಕು ಸೀರೆಗಳನ್ನು ವಿತರಿಸಲಾಗಿದೆ. ಮುಂದಿನ ಒಂದು ವರ್ಷದ ತನಕ ದಿನಂಪ್ರತಿ ಈ ಸೀರೆಯನ್ನು ಸಮವಸ್ತ್ರವನ್ನಾಗಿ ಬಳಸಲು ಸೂಚಿಸಲಾಗಿತ್ತು. ಸೆ.15ರಂದು ಸೀರೆ ಬಂದಿದ್ದು, ಅ.2ರಿಂದ ಉಡುವಂತೆ ಸೂಚಿಸಲಾಗಿತ್ತು. ಸೀರೆ ಉಡಲು ಆರಂಭಿಸಿದ ಹದಿನೈದು ದಿನದಲ್ಲೇ ಸೀರೆಯ ಒಂದು ಭಾಗದಲ್ಲಿ ನೂಲು ಬಿಡಲು ಆರಂಭಿಸಿದೆ. ಕೆಲವು ಸೀರೆಗಳಲ್ಲಿ ಕಪ್ಪು ಕಲೆಗಳೂ ಕಂಡು ಬಂದಿವೆ ಎಂದು ದೂರಲಾಗಿದೆ.

ಸೀರೆಯ ಬೆಲೆ 400 ರೂಪಾಯಿ!

Advertisement

ರಾಜ್ಯದ 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರಿಗೆ ಸರಕಾರವೇ ನೇರವಾಗಿ ಸೀರೆ ವಿತರಿಸಿದೆ. ಸೀರೆಗೆ ತಲಾ  400 ರೂ. ಬೆಲೆ ನಿಗದಿಯಾಗಿದೆ. ಆದರೆ  ಗುಣಮಟ್ಟ ನೋಡುವಾಗ 100 ರೂ.ನ ಆಸುಪಾಸಿನಲ್ಲಿದೆ ಎನ್ನುತ್ತಾರೆ ಫ‌ಲಾನುಭವಿಗಳು.

ಸಮವಸ್ತ್ರವಾಗಿ ನೀಡಿರುವ ಸೀರೆ ಹದಿನೈದು ದಿನದಲ್ಲಿಯೇ ನೂಲು ಬಿಟ್ಟಿದೆ. ಹೀಗಾಗಿ ಇದನ್ನು ಒಂದು ವರ್ಷ ಉಡುವುದು ಹೇಗೆ? ಹಲವಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಈ ಸಮಸ್ಯೆಯನ್ನು ಪ್ರಸ್ತಾವಿಸಿದ್ದಾರೆ.

ತಾರಾ ಜೆ. ಬಲ್ಲಾಳ್‌ ಅಧ್ಯಕ್ಷೆ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ, ದ.ಕ.ಜಿಲ್ಲೆ

 

Advertisement

Udayavani is now on Telegram. Click here to join our channel and stay updated with the latest news.

Next