ಕುಣಿಗಲ್: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು 2135 ಗ್ರಾಂ. ಗಾಂಜಾ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ.
ತಾಲೂಕಿನ ಸೀಗೇಪಾಳ್ಯ ಗ್ರಾಮದ ವಾಸಿ ಸಂತೋಷ್ (22) ಬಂಧಿತ ಆರೋಪಿ.
ಸೀಗೇಪಾಳ್ಯ ಗ್ರಾಮದ ಮನೆಯಲ್ಲಿ ಸಂತೋಷ್ ಆಕ್ರಮ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್, ಎಎಸ್ಪಿ ವಿ.ಮರಿಯಪ್ಪ, ಡಿವೈಎಸ್ಪಿ ಲಕ್ಷ್ಮಿಕಾಂತ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ನವೀನ್ ಗೌಡ ಅವರ ನೇತೃತ್ವದಲ್ಲಿ ಮನೆಗೆ ದಾಳಿ ಮಾಡಿದ್ದಾರೆ.
ಮನೆಯಲ್ಲಿ ಇಟ್ಟುಕೊಂಡಿದ್ದ 2135 ಗ್ರಾಂ. ಗಾಂಜಾವನ್ನು ಮತ್ತು ಆರೋಪಿ ಸಂತೋಷನನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ತಹಶೀಲ್ದಾರ್ ವಿಶ್ವನಾಥ್, ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಷಡಕ್ಷರಿ, ಯೋಗಿಶ್, ನಟರಾಜ್ ಇದ್ದರು.