ವಾಷಿಂಗ್‌ಟನ್ : ಗಾಳಿಯಲ್ಲಿ ಉಸಿರಾಡುವ ಹಾಗೂ ಭೂಮಿಯ ಮೇಲೆ ವಾಸಿಸುವ ಮೀನಿನ ತಳಿಯೊಂದು ವಾಷಿಂಗ್‌ಟನ್ ಜಾರ್ಜಿಯಾದಲ್ಲಿ ಕಂಡು ಬಂದಿದೆ.
ಜಾರ್ಜಿಯಾ ಸೇರಿದಂತೆ ದೇಶದ ಇತರ 14 ರಾಜ್ಯಗಳಲ್ಲಿ ಈ ಮೀನುಗಳು ಪತ್ತೆಯಾಗಿವೆ ಎಂದು ವರದಿಯಾಗಿದ್ದು, ಇದರ ಮೈಬಣ್ಣ ಕಡು ಕಂದು ಬಣ್ಣದಿಂದ ಕೂಡಿದ್ದು, ಮೂರು ನೀಳವಾದ ಕಾಲುಗಳಿವೆ. ಜತೆಗೆ ಇದು ಗಾಳಿಯಲ್ಲಿ ಉಸಿರಾಡುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಮಟ್ಟದ ಆಮ್ಲಜನಕಯುಕ್ತ ವ್ಯವಸ್ಥೆಯಲ್ಲಿ ಬದುಕುಳಿಯುವ ಶಕ್ತಿ ಈ ಮೀನಿಗಿದೆ.
ಆದರೆ ಈ ಕುರಿತು ಕಳವಳ ವ್ಯಕ್ತಪಡಿಸಿರುವ ಅಲ್ಲಿನ ಅರಣ್ಯ ಅಧಿಕಾರಿಗಳು ಎಚ್ಚರಿಕೆ ಕರೆ ನೀಡಿದ್ದು, ಒಂದು ವೇಳೆ ಜನರು ಈ ಮೀನನ್ನು ಕಂಡರೆ ಕೊಲ್ಲುವಂತೆ ಸೂಚನೆ ನೀಡಿದ್ದಾರೆ.
ಜತೆಗೆ ಈ ನಿರ್ಧಾರಕ್ಕೆ ಕಾರಣ ತಿಳಿಸಿರುವ ಅಧಿಕಾರಿಗಳು ಈ ಮೀನಿನಿಂದ ಅರಣ್ಯಕ್ಕೆ ವಿಪತ್ತು ಎದುರಾಗಲಿದ್ದು, ಸಮುದ್ರದ ಇತರ ಜೀವಿಗಳೊಂದಿಗೆ ನೈಸರ್ಗಿಕವಾಗಿ ಹಲವಾರು ಸಮಸ್ಯೆಗಳು ಉದ್ಬವವಾಗಲಿದೆ.
ಗ್ವಿನೆಟ್ ದೇಶದ ಮೀನುಗಾರನ ಕಣ್ಣಿಗೆ ಮೊದಲು ಈ ಮೀನು ಕಂಡಿದ್ದು, ತಕ್ಷಣ ವಿಷಯವನ್ನು ಅರಣ್ಯ ಇಲಾಖೆಗೆ ತಲುಪಿಸಿರುವುದಕ್ಕೆ ಅಧಿಕಾರಿಗಳು ಧನ್ಯವಾದವನ್ನು ತಿಳಿಸಿದ್ದಾರೆ.