Advertisement

Tata Institute; ಶೀಘ್ರ 100 ರೂ ಗೆ ಸಿಗಲಿದೆ ಕ್ಯಾನ್ಸರ್‌ ಉಲ್ಬಣ ತಡೆಯುವ ಮಾತ್ರೆ?

11:58 AM Feb 29, 2024 | Team Udayavani |

ನವದೆಹಲಿ: ಕ್ಯಾನ್ಸರ್‌ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸುವ ನಿಟ್ಟಿನಲ್ಲಿ ಟಾಟಾ ಸ್ಮಾರಕ ಕೇಂದ್ರದ(ಟಿಎಂಸಿ) ವಿಜ್ಞಾನಿಗಳು ಹೆಜ್ಜೆಯಿಟ್ಟಿದ್ದಾರೆ. ಟಿಎಂಸಿ ವೈದ್ಯರು ಕ್ಯಾನ್ಸರ್‌ ಉಲ್ಬಣ ತಡೆಯುವ “ಪ್ರೋ ಆಕ್ಸಿಡೆಂಟ್‌’ ಮಾತ್ರೆಯನ್ನು ಕಂಡುಹಿಡಿದಿದ್ದು, ಶೀಘ್ರದಲ್ಲೇ ಕೇವಲ 100 ರೂ.ಗೆ ಒಂದರಂತೆ ಮಾತ್ರೆ ಲಭ್ಯವಾಗಲಿದೆ.

Advertisement

“ಕ್ಯಾನ್ಸರ್‌ ಗುಣಪಡಿಸುವ ಮಾತ್ರೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕಳೆದ ಒಂದು ದಶಕದಿಂದ ಟಿಎಂಸಿ ವೈದ್ಯರು ಶ್ರಮಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ದಿಂದ ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಅನುಮೋದನೆ ದೊರೆತರೆ ಜೂನ್‌ -ಜುಲೈ ವೇಳೆಗೆ ಈ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ’ ಎಂದು ಹಿರಿಯ ಕ್ಯಾನ್ಸರ್‌ ಸರ್ಜನ್‌ ತಿಳಿಸಿದ್ದಾರೆ.

ಇದು ಕ್ಯಾನ್ಸರ್‌ ಉಲ್ಬಣಿಸದಂತೆ ಮತ್ತು ಮರುಕಳಿಸದಂತೆ ತಡೆಯುವುದರ ಜೊತೆಗೆ, ರೇಡಿಯೋಥೆರಪಿ, ಕೀಮೋಥೆರಪಿಯ ಅಡ್ಡಪರಿಣಾಮಗಳನ್ನು ಶೇ.50 ರಷ್ಟು ತಗ್ಗಿಸಲಿದೆ ಎಂದೂ ಹೇಳಿದ್ದಾರೆ.

ಥೆರಪಿ ನಂತರ ಸಾಯುತ್ತಿರುವ ಕ್ಯಾನ್ಸರ್‌ ಕೋಶಗಳು ಜೀವಕೋಶ ಮುಕ್ತ ಕ್ರೊಮಾಟಿನ್‌ ಕಣಗಳನ್ನು ಬಿಡುಗಡೆ ಮಾಡುತ್ತವೆ. ಇದು ಆರೋಗ್ಯಕರ ಕೋಶಗಳನ್ನು ಕ್ಯಾನ್ಸರ್‌ ಆಗಿ ಪರಿವರ್ತಿಸುತ್ತದೆ. ಚಿಕಿತ್ಸೆ ನೀಡಿದ, ಸಾಯುತ್ತಿರುವ ಕ್ಯಾನ್ಸರ್‌ ಕೋಶಗಳಿಂದ ಬಿಡುಗಡೆಯಾದ ಜೀವಕೋಶ ಮುಕ್ತ ಕ್ರೊಮಾಟಿನ್‌ ಕಣಗಳನ್ನು ನಿಷ್ಕ್ರಿಯಗೊಳಿಸುವ ಮತ್ತು ನಾಶಪಡಿಸುವ ಔಷಧಗಳನ್ನು ಸೇರಿಸುವುದನ್ನು ಅಧ್ಯಯನವು ಸೂಚಿಸುತ್ತದೆ. ಹೀಗಾಗಿ ಈ ಮಾತ್ರೆಗಳನ್ನು ಟಾಟಾ ಇನ್ಸ್‌ಸಿಸ್ಟೂಟ್‌ ಆಫ್ ಫ‌ಂಡಮೆಂಟಲ್‌ ರಿಸರ್ಚ್‌ (ಟಿಐಎಫ್ಆರ್‌)ನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈಗಾಗಲೇ ಇಲಿಗಳ ಮೇಲೆ ಇದರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next