Advertisement

ಒಂದು ತುತ್ತಿನ ಕತೆ

10:53 PM Sep 20, 2019 | Team Udayavani |

ಶಿರ್ಲಾಲ್‌ನ ಕಿರುದಾರಿಯೊಂದರಲ್ಲಿ ಸಾಗುತ್ತಿದ್ದಾಗ, ಸಿಕ್ಕಿದ್ದು “ಪುಟ್ಟಣ್ಣ’ ಎಂಬವರ ಪುಟ್ಟ ಮನೆ. ಪುಟ್ಟಣ್ಣ ಅವರು ತನ್ಮಯವಾಗಿ ಬುಟ್ಟಿ ಹೆಣೆಯುತ್ತಿದ್ದರು. ಅವರ ಹೊಟ್ಟೆಯೊಳಗೆ, ಹಸಿವಿನ ತಂಬೂರಿ ಬಾರಿಸುತ್ತಿದ್ದಾಗ, ಅವರ ಮುದ್ದಿನ ಮಡದಿ, ತುತ್ತಿನ ತಯಾರಿಯಲ್ಲೇ ಸಂಗೀತ ಕಚೇರಿ ಏರ್ಪಡಿಸಿದ್ದರು. ಐದಾರು ನಿಮಿಷ ಅಕ್ಕಿ ಆರಿಸುವ ಕೆಲಸದಲ್ಲೂ ಕಾಣಸಿಗುವ, ಕೇಳಸಿಗುವ ಈ ಪುಟ್ಟ ಸಂಗೀತ, ಹಳ್ಳಿಯ ಜೀವಿಗಳ ಜತೆಗೇ ಗಂಧವಾಗಿ ಬೆರೆತಿದೆ. ಪಟ್ಟಣದ ಕುಕ್ಕರ್‌ನ ವಿಷಲ್ಲುಗಳ ಮುಂದೆ, ಶಾಸ್ತ್ರೀಯವಾಗಿ ಕಿವಿಗೆ ತಂಪೆರೆವ ಈ ಗಜಲ್ಲುಗಳಲ್ಲಿ ಏನೋ ಮಾಂತ್ರಿಕತೆಯಿದೆ.

Advertisement

– ಅಂಚನ್‌ ಸುಜೀತ್‌ – ಶಿರ್ಲಾಲು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next