Advertisement

Puttur ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು

12:55 AM Aug 28, 2023 | Team Udayavani |

ಪುತ್ತೂರು: ತನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆ. 22ರಂದು ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಕಟ್ಟತ್ತಾರು, ನಿಡ್ಯಾಣ ನಿವಾಸಿ ಅಬ್ದುಲ್‌ ನಾಸಿರ್‌ ಆ. 27ರಂದು ಮೃತಪಟ್ಟಿದ್ದಾರೆ.

Advertisement

ಅಬ್ದುಲ್‌ ನಾಸಿರ್‌ ಆತ್ಮಹತ್ಯೆ ಯತ್ನಕ್ಕೂ ಮುನ್ನ ವೀಡಿಯೋ ಮಾಡಿ ಬೆಳ್ಳಾರೆ ಸಮೀಪದ ಮನೆಯೊಂದರಲ್ಲಿ ತಾನು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅಲ್ಲಿ ನನಗೆ ಹೊಡೆದಿದ್ದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.

ಮೊಬೈಲ್‌ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.ಆ ಬಳಿಕ ನಾಸಿರ್‌ ಅವರು ಪುತ್ತೂರು ರೈಲ್ವೇ ಸ್ಟೇಷನ್‌ ಬಳಿ ವಿಷ ಸೇವಿಸಿದ್ದರು ಎನ್ನಲಾಗಿದ್ದು ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next