Advertisement
1. ಇನ್ಫೋಸಿಸ್ ಸಾಫ್ಟ್ವೇರ್ ಸಂಸ್ಥೆಯ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಪೂರ್ಣ ಹೆಸರು, ನಾಗವಾರ ರಾಮರಾವ್ ನಾರಾಯಣ ಮೂರ್ತಿ.2. ಅವರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ (ಆಗಿನ ಕೋಲಾರ) ಜಿಲ್ಲೆಯ ಶಿಡ್ಲಘಟ್ಟದಲ್ಲಿ.
3. ಅವರನ್ನು “ಭಾರತದ ಮಾಹಿತಿ ತಂತ್ರಜ್ಞಾನದ ಜನಕ’ ಎಂದು ಗುರುತಿಸಲಾಗುತ್ತದೆ.
4. ಐಐಟಿ ಕಾನ್‌ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಓದಿರುವ ಅವರು, 1976ರಲ್ಲಿ ಸಾಫೊóàನಿಕ್ಸ್ ಎಂಬ ಕಂಪನಿ ಪ್ರಾರಂಭಿಸಿದ್ದರು.
5. ಆದರೆ, ಆ ಕಂಪನಿ ಒಂದೂವರೆ ವರ್ಷಗಳಲ್ಲಿಯೇ ಮುಚ್ಚಲ್ಪಟ್ಟಿತು. ಆಗ ಅವರು, ಆರು ಜನ ಸ್ನೇಹಿತರೊಡಗೂಡಿ ಇನ್ಫೋಸಿಸ್ ಕಂಪನಿಯನ್ನು ಹುಟ್ಟು ಹಾಕಿದರು.
6. ಇನ್ಫೋಸಿಸ್ ಸ್ಥಾಪನೆಗೆ ಮೂರ್ತಿ ಅವರು, ತಮ್ಮ ಮಡದಿ ಸುಧಾ ಮೂರ್ತಿ ಅವರಿಂದಲೇ 10 ಸಾವಿರ ರೂ. ಸಾಲ ಪಡೆದಿದ್ದರು.
7. 1990ರಲ್ಲಿ ಇನ್ಫೋಸಿಸ್ ನಷ್ಟಕ್ಕೆ ಸಿಲುಕಿ ಮುಚ್ಚಲ್ಪಡುವ ಸ್ಥಿತಿ ಬಂದಾಗಲೂ ಎದೆಗುಂದದ ಮೂರ್ತಿಯವರು ಮತ್ತೆ ಕಂಪನಿಯನ್ನು ಬಲಿಷ್ಟಗೊಳಿಸಿದರು.
8. ಸರಳ ಜೀವನ ನಡೆಸುವ ಮೂರ್ತಿಯವರು ಪ್ರತಿ ತಿಂಗಳು ತಪ್ಪದೇ ಖರ್ಚು ಮಾಡುವುದು ಪುಸ್ತಕ ಖರೀದಿಗೆ ಮಾತ್ರ.
9. ಮಡದಿ ಸುಧಾಗೆ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವ ಮೂರ್ತಿ, ಪ್ರತಿ ಬಾರಿಯೂ ಮೊದಲ ಪುಟದಲ್ಲಿ “ಟು ಯು, ಫ್ರಂ ಮಿ’ ಎಂದು ಬರೆಯುತ್ತಾರಂತೆ.
10. ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.