Advertisement

ಪರಿಹಾರ ಕೇಂದ್ರದಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

11:20 AM Aug 26, 2018 | Team Udayavani |

ಸುಳ್ಯ: ಪಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿ ಅರಂತೋಡು ತೆಕ್ಕಿಲ ಸಭಾಭವನದ ಪರಿಹಾರ ಕೇಂದ್ರ
ದಲ್ಲಿದ್ದ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ನಿವಾಸಿ ಅಂಗಾರ (60) ಶುಕ್ರವಾರ ತಡರಾತ್ರಿ ಹೃದಯಾ
ಘಾತದಿಂದ ಮೃತಪಟ್ಟಿದ್ದಾರೆ.

Advertisement

ಆ. 24ರಂದು ರಾತ್ರಿ ಊಟ ಮಾಡಿ ಮಲಗಿದ್ದ ಸುಂದರ ಅವರಿಗೆ 1 ಗಂಟೆಯ ಹೊತ್ತಿಗೆ ಎದೆನೋವು  ಕಾಣಿಸಿಕೊಂಡಿತ್ತು. ತತ್‌ಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬಡ ಕುಟುಂಬದ ನಿವಾಸಿ ಆಗಿರುವ ಸುಂದರ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆ. 16ರಂದು ಮೊಣ್ಣಂಗೇರಿ ಬಳಿ ಪಾಕೃತಿಕ ಅವಘಡ ಸಂದರ್ಭ ಮಡಿಕೇರಿಯ ಪರಿಹಾರ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿನ ವಾತಾವರಣ ಒಗ್ಗದ ಕಾರಣ ಮರುದಿನ ಭಾಗಮಂಡಲ-ಕರಿಕೆ-ಸುಳ್ಯ ಮೂಲಕ ಅರಂತೋಡು ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ಅವರ ಮನೆ ಮಂದಿಯು ಕೇಂದ್ರದಲ್ಲಿ ಇದ್ದಾರೆ.

ಅಂಗಾರ ಅವರು ಪ್ರಥಮ ದಿನ ಮಡಿಕೇರಿಯಲ್ಲಿನ ಸಂತ್ರಸ್ತರ ಕೇಂದ್ರದಲ್ಲಿದ್ದ ಕಾರಣ, ಅರಂತೋಡಿನಲ್ಲಿ ಅವರ
ನೋಂದಣಿ ಮಾಡಿರಲಿಲ್ಲ ಎಂಬ ಮಾಹಿತಿಯು ಇದೆ. ಇದರಿಂದ ಅವರ ಹೆಸರು ಯಾವ ಕೇಂದ್ರದಲ್ಲಿ ನಮೂದು ಆಗಿದೆ ಎಂಬ ಬಗ್ಗೆ ಕುಟುಂಬದವರಿಗೆ ಗೊಂದಲ ಇದೆ. ಅಂಗಾರ ಅವರದ್ದು ಅರ್ಹ ಸಂತ್ರಸ್ತ ಕುಟುಂಬ. ಇಲ್ಲಿ ನೋಂದಣಿ ಆಗಿಲ್ಲ ಎಂಬ ಕಾರಣವೊಡ್ಡಿ ಪರಿಹಾರ ನಿರಾಕರಿಸಬಾರದು ಎಂಬ ಆಗ್ರಹ ಕೇಳಿ ಬಂದಿದೆ.

ವಿರಾಜಪೇಟೆ ಶಾಸಕರ ಭೇಟಿ
ಸಂತ್ರಸ್ತ ಅಂಗಾರ ಅವರು ಮೃತಪಟ್ಟ ಸುದ್ದಿ ತಿಳಿದು ವಿರಾಜಪೇಟೆ ಶಾಸಕ ಕೆ.ಜೆ. ಬೋಪಯ್ಯ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಯಾವುದಾದರೂ ಒಂದು ಕೇಂದ್ರದಲ್ಲಿ ನೋಂದಣಿ ಆಗಿದ್ದರೆ ಸಾಕು ಎಂದು ಅವರು ಕುಟುಂಬಸ್ಥರಿಗೆ ತಿಳಿಸಿದ್ದು, ಈ ಬಗ್ಗೆ ತಾನು ಗಮನ ಹರಿಸುವ ಭರವಸೆ ನೀಡಿದ್ದಾರೆ. ಕೊಡಗು ಜಿ.ಪಂ. ಮುಖ್ಯಕಾರ್ಯನಿರ್ವ ಹಣಾಧಿಕಾರಿ ಪ್ರಶಾಂತ್‌, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್‌ ಕುಂಞಮ್ಮ ಆಸ್ಪತ್ರೆಗೆ ಭೇಟಿ ನೀಡಿದರು.

ಸುಳ್ಯದಲ್ಲಿ ಅಂತ್ಯಸಂಸ್ಕಾರ
ಮೊಣ್ಣಂಗೇರಿ ಪ್ರದೇಶ ಸಹಜ ಸ್ಥಿತಿಗೆ ಬಾರದಿರುವ ಕಾರಣ ಸುಳ್ಯ ಕುಟುಂಬದ ಸದಸ್ಯರ ನಿರ್ಧಾರದಂತೆ ನಗರದ ಕೇರ್ಪಳದ ರುದ್ರಭೂಮಿಯಲ್ಲಿ ಅಂಗಾರ  ಅಂತ್ಯಸಂಸ್ಕಾರ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next