Advertisement

ರಾತ್ರಿ ಪ್ರವಾಹಕ್ಕೆ ಸಿಲುಕಿ12 ಗಂಟೆಗಳನ್ನು ಮರದ ಮೇಲೆ ಕಳೆದು ಪ್ರಾಣ ಉಳಿಸಿಕೊಂಡ ವ್ಯಕ್ತಿ!

07:47 PM Jul 28, 2023 | Team Udayavani |

ಚಿಕ್ಕೋಡಿ:ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ-ಸಾಂಗ್ಲಿ ಜಿಲ್ಲೆಯ ಗಡಿಭಾಗದ ಮಾಂಗ್ಲೆ-ಕಾಖೆ ಸೇತುವೆ ಬಳಿ ಗುರುವಾರ ರಾತ್ರಿ 9 ಗಂಟೆಯ ವೇಳೆಯಲ್ಲಿ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಯೋರ್ವ 12 ಗಂಟೆಗಳ ಕಾಲ ಮರದ ಮೇಲೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದು, ಅವರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

Advertisement

ಮಹಾರಾಷ್ಟ್ರದ ಲದೇವಾಡಿ ಗ್ರಾಮದ ಬಜರಂಗ ಖಾಮಕರ್ ( 58) ನೀರಿಗೆ ಬಿದ್ದ ವ್ಯಕ್ತಿ. ಈ ವೇಳೆ ಪ್ರವಾಹದ ನೀರಿನಲ್ಲಿ ಸುಮಾರು 700 ಮೀಟರ್ ನಷ್ಟು ಹರಿದು ನದಿಯ ಮಧ್ಯದಲ್ಲಿರುವ ಮರಕ್ಕೆ ಅಪ್ಪಳಿಸಿದರು. ಈ ಸಮಯದಲ್ಲಿ, ಅವರು ಮರದ ಕೊಂಬೆಗಳ ಬೆಂಬಲದೊಂದಿಗೆ ಇಡೀ ರಾತ್ರಿ ಮರದ ಮೇಲೆ ಕುಳಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ರಾತ್ರಿ ಸಹಾಯಕ್ಕಾಗಿ ಕರೆದರೂ ಯಾರೂ ಬರಲಿಲ್ಲ. ಆದರೆ ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಹೊಲದಲ್ಲಿರುವ ಜನರು ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲಾ ಆಡಳಿತಕ್ಕೆ ಘಟನೆಯನ್ನು ತಿಳಿಸಿದರು. ಬಳಿಕ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದ್ದು, ಸುಮಾರು 12 ಗಂಟೆಗಳ ಬಳಿಕ ಬೆಳಗ್ಗೆ 10.30ರ ವೇಳೆಗೆ ದೋಣಿಯ ಸಹಾಯದಿಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು. ಬಜರಂಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಆರೋಗ್ಯವಾಗಿರುವುದಾಗಿ ವೈದ್ಯರು ಹೇಳಿದ ಬಳಿಕ ಮನೆಗೆ ಕಳುಹಿಸಿದ್ದಾರೆ.

ಈ ಸಂದರ್ಭದಲ್ಲಿ ಶಿರಾಳಾ ತಹಶೀಲ್ದಾರ್ ಶ್ಯಾಮಲಾ ಖೋತ್ ಪಾಟೀಲ್, ಪನ್ಹಾಳಾ ತಹಶೀಲ್ದಾರ್ ಮಾಧವಿ ಶಿಂಧೆ ಜಾಧವ, ಶಿರಾಳಾ ಪೊಲೀಸ್ ನಿರೀಕ್ಷಕ ಸಿದ್ಧೇಶ್ವರ ಜಂಗಮ, ಕೋಡೋಲಿ ಪೊಲೀಸ್ ಠಾಣೆ ಪಿಎಸ್ ಐ ಶೀತಲಕುಮಾರ ದೋಯಿಜಡ ಉಪಸ್ಥಿರಿದರು.

Advertisement

Udayavani is now on Telegram. Click here to join our channel and stay updated with the latest news.

Next