Advertisement
ಸುಮಾರು 20 ವರ್ಷಗಳ ಹಿಂದೆ ಪಡೀಲ್, ಕಣ್ಣೂರು, ಅಡ್ಯಾರ್ ಪ್ರದೇಶ ಗದ್ದೆಯಿಂದ ಕೂಡಿತ್ತು. ಸದ್ಯ ವಿಶಾಲ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡಗಳನ್ನು ಕಟ್ಟಲಾಗಿದೆ. ನೀರಿನ ತೋಡುಗಳು ಮಾಯವಾಗಿವೆ. ಕಾಲಾನುಕ್ರಮೇಣ ಬಹುಮಹಡಿ ಕಟ್ಟಡಗಳು ಸುತ್ತಲೂ ತಲೆ ಎತ್ತಿದೆ. ಸಣ್ಣ ಓಣಿ ರಸ್ತೆಗಳು ಅಗಲಗೊಂಡಿದೆ. ಹೆದ್ದಾರಿಯೂ ಚತುಷ್ಪತಗೊಂಡಿದೆ. ಆದರೆ ಸುಮಾರು ಐದು ಕಿಲೋ ಮೀಟರ್ ದೂರದಿಂದ ಹರಿದು ಬರುವ ರಾಜಕಾಲುವೆ ಮಾತ್ರ ಇನ್ನೂ ವಿಸ್ತರಣೆಗೊಂಡಿಲ್ಲ. ಇದೇ ಕಾರಣಕ್ಕೆ ನೆರೆ ನೀರು ರಾಜಕಾಲುವೆಯಲ್ಲಿ ಸರಾಗವಾಗಿ ಹರಿಯದೆ ರಸ್ತೆಗೆ ನುಗ್ಗುತ್ತಿದೆ.
Related Articles
Advertisement
ಸ್ಥಳೀಯ ಮನಪಾ ಸದಸ್ಯೆ ಚಂದ್ರಾವತಿ “ಸುದಿನ’ಕ್ಕೆ ಪ್ರತಿಕ್ರಿಯಿಸಿ,” ಪಡೀಲ್, ಕೊಡಕ್ಕಲ್ ಸುತ್ತಲಿನ ಪ್ರದೇಶ ಈ ಹಿಂದೆ ಗದ್ದೆಯಿಂದ ಕೂಡಿತ್ತು. ಸದ್ಯ ಅಭಿವೃದ್ಧಿ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಇಲ್ಲಿನ ರಾಜಕಾಲುವೆ ವಿಸ್ತ ರಣೆಗೊಂಡಿಲ್ಲ. ಇದೇ ಕಾರಣಕ್ಕೆ ನೀರು ಸಮರ್ಪಕವಾಗಿ ಹರಿಯುವುದಿಲ್ಲ. ಈಗಾಗಲೇ ಎರಡು ಬಾರಿ ರಾಜಕಾಲುವೆ ಹೂಳೆತ್ತಲಾಗಿದೆ. ಆದರೂ ಶನಿವಾರ ಸುರಿದ ಭಾರೀ ಮಳೆಗೆ ತೋಡಿನಲ್ಲಿ ಒಂದು ಲೋಡ್ ಕಸ ಸಂಗ್ರಹವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎನ್‌ಐಟಿಕೆ ತಜ್ಞರು, ಸಣ್ಣ ನೀರಾವರಿ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಕೆಲ ದಿನಗಳ ಹಿಂದೆ ಈ ಪ್ರದೇಶ ಪರಿಶೀಲಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಭರವಸೆ ಇದೆ’ ಎನ್ನುತ್ತಾರೆ.
ಸದ್ಯದಲೇ ಹೆದ್ದಾರಿ ಪ್ರಾಧಿಕಾರ ಸಭೆ: ಕೆಲವು ದಿನಗಳ ಹಿಂದೆ ಎರಡು ಬಾರಿ ಸುರಿದ ಬಿರುಸಿನ ಮಳೆಗೆ ಪಡೀಲ್ ಸುತ್ತಲಿನ ಪ್ರದೇಶ ಜಲಾವೃತ ಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇಲ್ಲಿನ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹೋಗದಿರುವುದು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಪಾಲಿಕೆಯಿಂದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್