Advertisement

ಅವಧಿ ಮೀರಿದ ಬಿಸ್ಕೆಟ್‌ ಮಾರಾಟ

05:49 AM May 18, 2020 | Lakshmi GovindaRaj |

ತಿಪಟೂರು: ನಗರದ ಕೆಲ ಅಂಗಡಿಗಳಲ್ಲಿ ಮತ್ತು ಬೇಕರಿಗಳಲ್ಲಿ ಬಿಸ್ಕೆಟ್‌ ಮತ್ತಿತರ ಆಹಾರ ಪದಾರ್ಥಗಳು ಅವಧಿ ಮೀರಿದ  ದಿನಾಂಕವನ್ನು ಹೊಂದಿದ್ದರೂಕೂಡ ಗ್ರಾಮೀಣ ಭಾಗದಿಂದ ಬರುವ ಮುಗ್ಧ ಜನರಿಗೆ ಮಾರಾಟ  ಮಾಡುತ್ತಿದ್ದು, ಈ ಬಗ್ಗೆ ತಾಲೂಕು ಆಹಾರ ನಿರೀಕ್ಷಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.

Advertisement

ನಗರದಲ್ಲಿ ಅಂಗಡಿಯೊಂದ ರಲ್ಲಿ ಬಿಸ್ಕೆಟ್‌ ಖರೀದಿಸಲು ಹೋದಾಗ ಏಳು ತಿಂಗಳ ಹಿಂದಿನ ಬಿಸ್ಕೆಟ್‌ ಮಾರಾಟವಾಗುತ್ತಿದ್ದನ್ನು ಗಮನಿಸಿದ ಗ್ರಾಹಕರು ಈ ಬಗ್ಗೆ ಉದಯವಾಣಿಗೆ ಮಾಹಿತಿ ನೀಡಿದ್ದಾರೆ. ಕೊರೊನಾ ಲಾಕ್‌ಡೌನ್‌ ನಿಂದಾಗಿ ಕಳೆದ 45 ದಿನಗಳಿಂದ ಅಂಗಡಿಗಳು ಬಾಗಿಲು ಹಾಕಲಾಗಿತ್ತು. ಈಗ ತಾಲೂಕು ಆಡಳಿತ ವ್ಯಾಪಾರ  ಮಾಡಲು ಅನುಮತಿ ನೀಡಿದೆ.

ಆದರೆ ಅಂಗಡಿ ಮಾಲೀಕರು ಬಿಸ್ಕೆಟ್‌ ಇನ್ನಿತರ ಆಹಾರ ಪದಾರ್ಥಗಳನ್ನು ಅವಧಿ ಮೀರಿದ ನಂತರ ಬಿಸಾಡದೆ ಲಾಭದ ಆಸೆಗಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next