ಮೈಸೂರು: ನಾವು ಮೊದಲು ಮಾನವರಾಗೋಣ. ಮನುಷ್ಯ-ಮನುಷ್ಯರು ಬೆರೆತಷ್ಟು ಶಾಂತಿ ವಾತಾವರಣ ಕಾಣಬಹುದು ಎಂದು ಇತಿಹಾಸ ತಜ್ಞ ಪೊ›.ಪಿ.ವಿ.ನಂಜರಾಜ ಅರಸು ಹೇಳಿದರು.
ಅಂತಃಕರಣ ಸಂಸ್ಥೆವತಿಯಿಂದ ನಗರದಲ್ಲಿ ಶುಕ್ರವಾರ “ನಾವು ಮನುಷ್ಯರು: ನಾವೆಲ್ಲರೂ ಒಂದೇ’ ಎಂಬ ಸಂದೇಶ ಸಾರಲು ಸೌಹಾರ್ದ ಮೆರವಣಿಗೆ ನಡೆಸಲಾಯಿತು. ಸಂತ ಫಿಲೋಮಿನಾ ಚರ್ಚ್ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಮಿಲಾದ್ ಪಾರ್ಕ್, ಅಶೋಕ ರಸ್ತೆಯ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.
ಶಾಂತಿ ಕದಡುವ ಕೆಲಸ ಬೇಡ: ಮೆರವಣಿಗೆಯ ನೇತೃತ್ವ ವಹಿಸಿದ್ದ ಉತಿಹಾಸ ತಜ್ಞರಾದ ಅಂತಃಕರಣ ಸಂಸ್ಥೆ ಅಧ್ಯಕ್ಷ ಪೊ›.ಪಿ.ವಿ. ನಂಜರಾಜ ಅರಸ್ ಮಾತನಾಡಿ, ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎನಿಸಿದೆ. ಇಲ್ಲಿ ಶಾಂತಿ ಕದಡುವ ಕೆಲಸ ಆಗಬಾರದು.
ಇಂತಹದೊಂದು ಸಂದೇಶವನ್ನು ಮೈಸೂರಿನಿಂದ ರವಾನಿಸುವ ದೃಷ್ಠಿಯಿಂದ ಸೌಹರ್ದ ಮೆರವಣಿಗೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು. ಧರ್ಮ, ಜಾತಿ ಎಂದು ಪರಸ್ಪ$ರ ಕಿತ್ತಾಡುವುದನ್ನು ಬಿಟ್ಟು ನಾವೆಲ್ಲರೂ ಮನುಷ್ಯರಾಗಿ ಬಾಳಬೇಕು ಎಂದರು.
ಹೊಸಮಠದ ಚಿದಾನಂದ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠದ ಜಾnನ ಪ್ರಕಾಶ ಸ್ವಾಮೀಜಿ, ಮೇಯರ್ ಎಂ.ಜೆ.ರವಿಕುಮಾರ್, ಉಪ ಮೇಯರ್ ರತ್ನಾಲಕ್ಷ್ಮಣ್, ಚಿಂತಕ ಪೊ›.ಶಬೀರ್‌ಮುಸ್ತಾಫ್, ವಿಹಿಂಪ ಮುಖಂಡ ಮುರಳೀಧರರಾವ್, ಲೇಖಕ ಬನ್ನೂರು ಕೆ. ರಾಜು, ಮಹಾ ನಗರಪಾಲಿಕೆ ಸದಸ್ಯರಾದ ಕೆ.ವಿ.ಮಲ್ಲೇಶ್, ಎಸ್.ಬಿ.ಎಂ. ಮಂಜು ಸೇರಿದಂತೆ ನೂರಾರು ಮಂದಿ ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.