Advertisement
ಪ್ರತಿ ದಿನ 10.50ಕ್ಕೆ ಮೆಡಿಕಲ್‌ನಿಂದ ಹೊರಬಂದು ವಿಸಿಲ್ ಹಾಕುತ್ತಾರೆ. ಕೂಡಲೇ ಸುತ್ತಮುತ್ತಲಿನ ಜನ ಸೇರಿ ಒಕ್ಕೊರಲಿನಲ್ಲಿ ರಾಷ್ಟ್ರ ಗೀತೆಯನ್ನು ಹಾಡುತ್ತಾರೆ. ತದನಂತರ ಬಂದವರಿಗೆ ಅವರು ಸಿಹಿತಿಂಡಿಯನ್ನು ಹಂಚುತ್ತಾರೆ. ಪ್ರತಿದಿನವೂ ಕಾರ್ಯಕ್ರಮ ಆಯೋಜಿಸುತ್ತಿರುವ ಅವರ ರಾಷ್ಟ್ರ ಭಕ್ತಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ದಿನ ಅತಿಥಿಯೊರ್ವರನ್ನು ಕರೆದು ಅವರೊಂದಿಗೆ ರಾಷ್ಟ್ರ ಗೀತ ಗಾಯನದ ಜತೆ ಅವರ ಅನಿಸಿಕೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪ್ರತಿ ರವಿವಾರ ಸುತ್ತಮುತ್ತಲಿನ ಹಾಲು ಡೈರಿ, ಸಂಘ ಸಂಸ್ಥೆ, ವಠಾರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ದೇಶ ಪ್ರೇಮ, ನಿಧಿ ಸಂಗ್ರಹಣೆ
ದೇಶ ಹಾಗೂ ಸೈನಿಕರ ಮೇಲೆ ಅಪಾರ ಗೌರವ ಹೊಂದಿರುವ ಅವರು ತನ್ನ ಮೆಡಿಕಲ್‌ನಲ್ಲಿ ಸೈನಿಕ ನಿಧಿ, ಅನಾಥ ನಿಧಿ ಮತ್ತು ಗೋಗ್ರಾಸ ನಿಧಿಯನ್ನು ತೆರೆದು ಸ್ನೇಹಿತರು ಹಾಗೂ ನಾಗರಿಕರು ನೀಡಿದ ದೇಣಿಗೆಯನ್ನು ಸಂಬಂಧಪಟ್ಟವರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Related Articles
Advertisement
– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಇಂದು 365ನೇ ದಿನದ ರಾಷ್ಟ್ರ ಗೀತ ಗಾಯನದಿನಕರ್ ಪ್ರಭು ಅವರ ನೇತೃತ್ವದಲ್ಲಿ ವರ್ಷವಿಡೀ ಅಯೋಜಿಸಿದ ಹರ್‌ದಿನ್ ಜನಗಣಮನ ರಾಷ್ಟ್ರ ಗೀತ ಗಾಯನ ಯಜ್ಞ ದ ಕೊನೆಯ ದಿನ 365ನೇ ದಿನದ ಕಾರ್ಯಕ್ರಮ ಆ. 14ರಂದು ಬೆಳಗ್ಗೆ 11ಕ್ಕೆ ಹೆಬ್ರಿ ಉಷಾ ಮೆಡಿಕಲ್ ನಲ್ಲಿ ನಡೆಯಲಿದೆ. ಶಾಸಕ ವಿ. ಸುನೀಲ್ ಕುಮಾರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ. ರವಿವಾರ ನಡೆದ 364ನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಭಾಗವಹಿಸಿದರು. ತಾಯಿಯೇ ಪ್ರೇರಣೆ
ದೇಶದ ಬಗ್ಗೆ ಜನರಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಜ್ಞವನ್ನು ಮಾಡುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ದಿನನಿತ್ಯ ಭಾಗವಹಿಸಲು ತಾಯಿ ಸುಶೀಲಾ ಶ್ಯಾಮ ಪ್ರಭು ಅವರೇ ಪ್ರೇರಣೆ.
– ದಿನಕರ್ ಪ್ರಭು ಹೆಬ್ರಿ ಉದಯ ಕುಮಾರ್ ಶೆಟ್ಟಿ