Advertisement

ಮೆರುಗು ತಂದ ಮೆರವಣಿಗೆ

07:53 AM Nov 25, 2017 | Team Udayavani |

ಉಡುಪಿ: ಧರ್ಮ ಸಂಸದ್‌ ಅಧಿವೇಶನ ನಿಮಿತ್ತ ಕೃಷ್ಣ ಮಠದ ಪಾರ್ಕಿಂಗ್‌ ವಲಯದಿಂದ ಆರಂಭವಾದ ಭವ್ಯ ಮೆರವಣಿಗೆ ರೋಯಲ್‌ ಗಾರ್ಡನ್‌ ಮೈದಾನದ ಧರ್ಮ ಸಂಸದ್‌ ಸಭಾಂಗಣದಲ್ಲಿ ಸಮಾಪನಗೊಂಡಿತು. ಮಂತ್ರಘೋಷಗಳು, ಧರ್ಮ ಜೈಕಾರಗಳು ಹಾಗೂ ಸಕಲ ವಾದ್ಯ ಮೇಳಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾಧು, ಸಂತರು, ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ನಾಗರಿಕರು ಪಾದಯಾತ್ರೆಯ ಮೂಲಕ ಮೆರವಣಿಗೆಗೆ ಸಾಥ್‌ ನೀಡಿದರು. 

Advertisement

ನಗರದ ದುರ್ಗಾಗಣೇಶ ಚಂಡೆ ಬಳಗದ ಚಂಡೆ ವಾದನ, ಕುಂಜಾರು ಗಿರಿಶೇಖರ್‌ ಶೇರಿಗಾರ ಬಳಗದಿ ಂದ ಘರ್ಷಣಾ ವಾದ್ಯ, ಕಹಳೆ ಬಳಗ ಇತ್ಯಾದಿ ಮೆರವಣಿಗೆಗೆ ಸಾಥ್‌ ನೀಡಿದವು. ಬಾಂಧವ್ಯ ಚೆಂಡೆ ಮಹಿಳಾ ಬಳಗದ  ಚೆಂಡೆ ವಾದನವು ಗಮನ ಸೆಳೆಯಿತು. 

ಎಲ್ಲ ಸಂತರಿಗೆ ಗೌರವ
ಪಾರ್ಕಿಂಗ್‌ ಪ್ರದೇಶದಲ್ಲಿ ಎಲ್ಲ ಮಠಾಧೀಶರು, ಸಾಧು ಸಂತರಿಗೆ ಭಗಿನಿಯರು ಸಾಂಪ್ರದಾಯಿಕ ರೀತಿಯ ಗೌರವ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. 

ಸಾಧುಗಳಿಗೊಂದು ಕಿಟ್‌ 
ಧರ್ಮ ಸಂಸದ್‌ ಸಭಾಂಗಣದಲ್ಲಿ ಎಲ್ಲ ಸಾಧುಸಂತರಿಗೆ ಕಿಟ್‌ ಒಂದನ್ನು ನೀಡಲಾಯಿತು. ಕೇಸರಿ ಬಟ್ಟೆಯ ಚೀಲದಲ್ಲಿ ಒಂದು ಶ್ರೀಗಂಧದ ಕೊರಡು, 300 ಗ್ರಾಂ ಏಲಕ್ಕಿ, 300 ಗ್ರಾಂ ಗೋಡಂಬಿ, ಕೃಷ್ಣನ ಮೂರ್ತಿ, ಒಂದು ಶಲ್ಯ, ಸ್ಮರಣ ಸಂಚಿಕೆಯನ್ನು ಕಿಟ್‌ ಒಳಗೊಂಡಿತ್ತು. ಚೀಲಕ್ಕೆ ಈ ಸಾಮಗ್ರಿಗಳನ್ನು ಪ್ರಬಂಧಕರು ಗುರುವಾರ ರಾತ್ರಿ ಹಾಕಿ ಸಿದ್ಧಪಡಿಸಿದ್ದರು.

ಶಿವ ಸ್ಥಾವರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next