ಜಮ್ಮುವಿನ ಹೊರವಲ ಯದಲ್ಲಿರುವ ಭೌರ್‌ಕ್ಯಾಂಪ್‌ನಲ್ಲಿ ಭೂ ಉತ್ಖನನದ ವೇಳೆ ವಿಗ್ರಹಗಳು ಪತ್ತೆಯಾಗಿವೆ. ಬಳಿಕ ಪುರಾತತ್ವ ವಸ್ತು ಸಂಗ್ರಹಾಲಯ ಇಲಾಖೆಯ ಸಹಾಯಕ ನಿರ್ದೇಶಕಿ ಸಂಗೀತಾ ಶರ್ಮಾ ಅವರ ನೇತೃತ್ವದ ನಾಲ್ವರು ಸದಸ್ಯರ ತಂಡವು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡಿದೆ.
Advertisement
ಪ್ರಾಚೀನವಾದ ಬಹಳ ಅಪರೂಪದ ವಿಗ್ರಹಗಳು 12ನೇ ಶತಮಾನದವೆಂಬುದು ಪ್ರಾಥಮಿಕ ಶೋಧದ ವೇಳೆ ತಿಳಿದುಬಂದಿದೆ. ಇಂದ್ರಾಣಿ ದೇವಿಯ ವಿಗ್ರಹ 28/12.5 ಇಂಚು ಅಳತೆಯದಾಗಿದೆ ಮತ್ತು 55 ಕೆ.ಜಿ. ತೂಕ ಹೊಂದಿದೆ. ಅದೇ ರೀತಿ ಶಿವನ ವಿಗ್ರಹವು 21/14 ಇಂಚಿನ ಅಳತೆಯಲ್ಲಿದ್ದು 40 ಕೆ.ಜಿ. ತೂಕ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.