Advertisement

ಒಂದು ದಿನದ ಲಾಕ್‌ಡೌನ್‌ ಪ್ರಯೋಜನವಾಗದು

11:52 AM Mar 27, 2020 | Sriram |

ಹೊಸದಿಲ್ಲಿ: ಇಂದು ಸಾಂಕೇತಿಕ ಪ್ರತಿಭಟನೆಯಾಗಿ ಜನತಾ ಕರ್ಫ್ಯೂ ಆಚರಿಸಲಾಗಿದೆ. ಮುಂದಿನ ಕೆಲವು ದಿನಗಳು ಇದೇ ಮುಂದುವರಿಯುವ ಸಾಧ್ಯತೆ ಇದೆ.

Advertisement

ಮುಂದಿನ ಹಲವು ದಿನಗಳ ಕಾಲ ಹಲವು ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲಾಗುತ್ತಿದೆ. ಕೋವಿಡ್‌ 19ವನ್ನು ತಡೆಗಟ್ಟಲು ಇದು ಸರಿಯಾದ ಕ್ರಮ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಗಳು ಕೇಳಿಬರುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್‌ ರಯಾನ್‌ ಅವರು ಲಾಕ್‌ಡೌನ್‌ ಒಂದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಕ್ರಮವನ್ನು ಪಾಲಿಸಿದರೆ ವಾರಗಳು ಅಗತ್ಯಬಿದ್ದರೆ ತಿಂಗಳುಗಳ ಕಾಲ ಪಾಲಿಸಬೇಕು. ಬಂದ್‌ಅನ್ನು ಹಿಂಪಡೆದರೆ ಸೋಂಕು ಮತ್ತೆ ಹರಡಲು ಪ್ರಾರಂಭಿಸುತ್ತದೆ. ಆದ್ದರಿಂದ ಬೇರೆ ಕ್ರಮಗಳನ್ನ ಕೈಗೊಳ್ಳುವುದು ಅತ್ಯಗತ್ಯ ಇದೆ. ಸಂಚಾರ ನಿರ್ಬಂಧವನ್ನು ಹಿಂಪಡೆದ ಬಳಿಕ ಸೋಂಕು ಮತ್ತೆ ಹರಡುವ ಅಪಾಯ ಇರುತ್ತದೆ ಎಂದು ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಮೈಕ್‌ ರಯಾನ್‌ ಹೇಳಿದ್ಧಾರೆ.

ಇಂದು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್‌ಡೌನ್‌ ಆಚರಿಸಲಾಯಿತು. ಬಹುತೇಕ ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಸದ್ಯ ಇಟಲಿಯಲ್ಲಿ ಮಾತ್ರ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ. ಜತೆಗೆ ಇತರ ದೇಶಗಳಿಗೂ ಈ ಮಾರಣಾಂತಿಕ ವೈರಸ್‌ ಹಬ್ಬುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next