Advertisement

Crime: ಪ್ರೇಮಿಗೆ ಬಾಲಕಿಯರನ್ನು ಪೂರೈಸುತ್ತಿದ್ದ ನರ್ಸ್‌!

11:46 PM Nov 10, 2023 | Team Udayavani |

ಕಡೂರು: ತಾಲೂಕಿನ ಕುಪ್ಪಾಳು ಮೊರಾರ್ಜಿ ವಸತಿ ಶಾಲೆಯ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮೂವರನ್ನು ಪೋಕ್ಸೋ ಕಾಯ್ದೆಯಡಿ ಕಡೂರು ಪೊಲೀಸರು ಬಂಧಿಸಿದ್ದಾರೆ.

Advertisement

ಮೂಲತಃ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಹೋಬಳಿಯ ಮುಳುಕೆರೆ ಗ್ರಾಮದ ನಿವಾಸಿ, ಕಡೂರು ತಾಲೂಕು ಅಂಚೆಚೋಮನಹಳ್ಳಿಯ ಆರೋಗ್ಯ ಇಲಾಖೆಯಲ್ಲಿ ಎಎನ್‌ಎಂ ನರ್ಸ್‌ ಆಗಿರುವ ಚಂದನಾ (26), ಎರಡನೇ ಆರೋಪಿ ಅಂಚೆಚೋಮನಹಳ್ಳಿಯ ಗ್ರಾಮದ ತೊಟ್ಟಿಮನೆ ಸುರೇಶ್‌ (35) ಹಾಗೂ ಮೂರನೇ ಆರೋಪಿ ಸೊರಬ ತಾಲೂಕಿನ ಆನವಟ್ಟಿಯ ಫ್ಯಾನ್ಸಿ ಸ್ಟೋರ್‌ ಮಾಲಕ ವಿನಯ್‌ ಕುಮಾರ್‌(27) ಬಂಧಿತರು.

ಚಂದನಾಳಿಗೆ ಮದುವೆಯಾಗಿದ್ದು, ಈಗ ಗರ್ಭಿಣಿ. ಈಕೆಗೆ ವಿವಾಹಿತ ವಿನಯ್‌ ಕುಮಾರ್‌ ಜತೆ ಪ್ರೇಮವಿದ್ದು, ಆತನಿಗೆ ಚಂದನಾಳು ಮೊರಾರ್ಜಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌ ಎಂಬವನ ಸಹಾಯ ಪಡೆದು ವಸತಿ ಅಲ್ಲಿನ ವಿದ್ಯಾರ್ಥಿನಿಯರನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next