Advertisement

ಕುಪ್ಪೆಪದವು: ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಬಂಧನ

09:22 AM Jul 15, 2019 | keerthan |

ಎಡಪದವು: ಹಲವು ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡು ಬಂಧನದ ವಾರಂಟ್‌ ಎದುರಿಸುತ್ತಿದ್ದ ಕುಪ್ಪೆಪದವು ಸಮೀಪದ ಕಿಲೆಂಜಾರು ಗ್ರಾಮದ ಕಟ್ಟೆಮಾರ್‌ ಹಳೆ ನೀರುಮನೆ ನಿವಾಸಿ ಹಂಝ ಯಾನೆ ಗೋಳಿಬಜೆ ಹಂಝ ಯಾನೆ ಹಂಸ(47)ನನ್ನು ಬಂಧಿಸಲಾಗಿದೆ.

Advertisement

ಈತನ ವಿರುದ್ಧ ಬಜಪೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಬಂಧನದ ವೇಳೆ ಆತ ಗಾಂಜಾ ಸೇವಿಸಿದ್ದ ಎಂಬುದನ್ನು ವೈದ್ಯಕೀಯ ತಪಾಸಣೆಯಿಂದ ಖಚಿತ ಪಡಿಸಿ ಕೊಳ್ಳಲಾಗಿದೆ.

ಈತ ಕುಪ್ಪೆಪದವಿನಲ್ಲಿ ಇದ್ದಾನೆಂಬ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಎಸ್‌. ಪರಶಿವ ಮೂರ್ತಿ ಅವರು ನೀಡಿದ ಆದೇಶದಂತೆ ಎಎಸ್‌ಐ ರಾಮ ಪೂಜಾರಿ ಹಾಗೂ ಎಚ್‌ಸಿ ರಾಜೇಶ್‌ ಅವರು ಆರೋಪಿಯನ್ನು ಬಂಧಿಸದರು. ಅವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next