ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮಾ.29ರಿಂದ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳ ಆಚರಿಸಲಾಗುವ ಜಯಂತಿಗಳ ಆಚರಣೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಎಪ್ರಿಲ್ 4ರಂದು ಭಗವಾನ್ ಮಹಾವೀರ ಜಯಂತಿ, ಎಪ್ರಿಲ್ 6ರಂದು ಅಕ್ಕಮಹಾದೇವಿ ಜಯಂತಿ, ಎಪ್ರಿಲ್ 23 ಬಸವ ಜಯಂತಿ, ಎಪ್ರಿಲ್ 25 ಶಂಕರಾಚಾರ್ಯ ಜಯಂತಿ, ಎಪ್ರಿಲ್ 27ರಂದು ಭಗೀರಥ ಜಯಂತಿ ಹಾಗೂ ಮೇ 10ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಬೇಕಿದೆ.
ಆದರೆ, ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಈ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲು ತಿಳಿಸಲಾಗಿದೆ.
ಅಲ್ಲದೇ ಈ ಆಚರಣೆಗಳಿಗೆ ಪ್ರತಿ ಜಯಂತಿಗೆ ಜಿಲ್ಲಾ ಮಟ್ಟಕ್ಕೆ ಮೂರು ಸಾವಿರ ಹಾಗೂ ತಾಲೂಕು ಮಟ್ಟಕ್ಕೆ 1,500 ರೂ. ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.