Advertisement

ಸಂಸದರಿಗೆ “ಕಾಲ್‌ ಸೆಂಟರ್‌’

09:53 AM Dec 29, 2019 | Team Udayavani |

ಹೊಸದಿಲ್ಲಿ: ದೇಶದ ಎಲ್ಲ ಸಂಸದರಿಗೆ ಆಡಳಿತಾತ್ಮಕವಾಗಿ ನೆರವಾಗುವ ಉದ್ದೇಶದೊಂದಿಗೆ ಸಂಸತ್‌ ಭವನದಲ್ಲಿ “ಮಾಹಿತಿ ಮತ್ತು ಸಂವಹನ ಕೇಂದ್ರ’ ಎಂಬ ಕಾಲ್‌ ಸೆಂಟರ್‌ ಅನ್ನು ಆರಂಭಿಸಲಾಗಿದೆ.

Advertisement

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾರವರ ಆಸ್ಥೆಯಿಂದ ಆರಂಭವಾಗಿರುವ ಈ ಕೇಂದ್ರದಿಂದ ಸಂಸದರು, ಕಲಾಪಗಳಲ್ಲಿ ಯಾವುದೇ ವಿಷಯ ಮಂಡನೆ ಮಾಡ ಬೇಕಿದ್ದಲ್ಲಿ ಅದಕ್ಕೆ ಪೂರಕವಾದ ದಾಖಲೆಗಳನ್ನು ಈ ಕಾಲ್‌ ಸೆಂಟರ್‌ನ ಸಹಾಯದಿಂದ ಪಡೆಯಬಹುದು. ಜತೆಗೆ, ಸರಕಾರದಿಂದ ತಮಗೆ ಬರಬೇಕಿರುವ ಪ್ರಯಾಣ ಭತ್ಯೆಗಳ ಸ್ಥಿತಿಗಳನ್ನು ತಿಳಿಯಬಹುದು. ಹೀಗೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಹಲವಾರು ರೀತಿಗಳಲ್ಲಿ ಈ ಕೇಂದ್ರ ಸಂಸದರ ನೆರವಿಗೆ ಬರಲಿದೆ. ಕಳೆದ ತಿಂಗಳು, ಇದನ್ನು ಪ್ರಾಯೋಗಿಕ ವಾಗಿ ಆರಂಭಿಸಲಾಗಿದ್ದು ಅದು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈಗ ಪೂರ್ಣ ಪ್ರಮಾಣದಲ್ಲಿ ಇದನ್ನು ಚಾಲ್ತಿಗೆ ತರಲಾಗಿದೆ.

ಸ್ವರೂಪ ಹೇಗಿದೆ?: ಈ ಕಾಲ್‌ ಸೆಂಟರ್‌ ಸಂಸತ್‌ ಭವನದ 13ನೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಜವಾಬ್ದಾರಿ ಯನ್ನು ಮೂವರು ಅಧಿಕಾರಿಗಳಿಗೆ ವಹಿಸಲಾಗಿದೆ. ಜತೆಗೆ, ಒಬ್ಬ ಮುಖ್ಯ ಸಂಯೋಜನಾಧಿಕಾರಿ, ಅವರ ಅಧೀನದಲ್ಲಿ ಕೆಲವಾರು ಸಹ-ಸಂಯೋಜನಾಧಿಕಾರಿಗಳು, ನೋಡಲ್‌ ಅಧಿಕಾರಿಗಳು ಇದ್ದಾರೆ. ಸಂಸದರು ಕಾಲ್‌ ಸೆಂಟರ್‌ನಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯಲು ತಮ್ಮವರೇ ಆದ ವ್ಯಕ್ತಿಯೊಬ್ಬರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಆ ವ್ಯಕ್ತಿ ಸಂಸದರ ಪರವಾಗಿ ಅಗತ್ಯ ಮಾಹಿತಿಯನ್ನು ಕಾಲ್‌ಸೆಂಟರ್‌ ಮೂಲಕ ಪಡೆಯಬಹುದು.

ಲೋಕಸಭಾ ಸ್ಪೀಕರ್‌
ಓಂ ಬಿರ್ಲಾರ ಆಶಯದಂತೆ ಕೇಂದ್ರ ಪ್ರಾರಂಭ
ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದ ಕೇಂದ್ರವೀಗ ಪೂರ್ಣ ಪ್ರಮಾಣದಲ್ಲಿ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next