Advertisement

ಸುವರ್ಣ ಸಂಭ್ರಮದ ‘ಯಕ್ಷಿ’ಗೆ ನೂತನ ಕಾಯಕಲ್ಪ

01:05 AM Feb 03, 2019 | |

ತಿರುವನಂತಪುರ: ಕೇರಳದ ಸುಪ್ರಸಿದ್ಧ ಪ್ರತಿಮೆಯಾದ ‘ಯಕ್ಷಿ’ಯು ನಿರ್ಮಾಣವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಹಾಗೂ ಹವಾಮಾನ, ಪ್ರದೂ ಷಯಿಂದ ಪ್ರತಿಮೆಯ ಚೆಲುವು ಮಾಸಿರುವ ಕಾರಣದಿಂದಾಗಿ ಪ್ರತಿಮೆಗೆ ನೂತನ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಪಾಲಕ್ಕ್ಕಾಡ್‌ ಜಿಲ್ಲೆಯ ಮಳಂಪುಳ ಗಾರ್ಡನ್‌ನಲ್ಲಿರುವ ಈ ಪ್ರತಿಮೆಯನ್ನು 1969ರಲ್ಲಿ ಕೇರಳದ ಖ್ಯಾತ ಶಿಲ್ಪಿ ಕನಾಯಿ ಕುಹಿಮಾರನ್‌ ಕೆತ್ತಿದ್ದರು. ಅವರಿಗೀಗ 81 ವರ್ಷ ವಯಸ್ಸಾಗಿದ್ದು, ಈ ಇಳಿ ವಯಸ್ಸಿನಲ್ಲಿ ಅವರೇ ಖುದ್ದಾಗಿ ಈ ಪ್ರತಿಮೆಯ ಕಾಯಕಲ್ಪಕ್ಕೆ ಮುಂದಾಗಿರುವುದು ವಿಶೇಷ. ನಗ್ನ ಮಹಿಳೆಯೊಬ್ಬಳು ಕುಳಿತ ಭಂಗಿಯಲ್ಲಿರುವ ಈ ಶಿಲ್ಪ ಐವತ್ತು ವರ್ಷಗಳ ಹಿಂದೆ ನಿರ್ಮಾಣವಾದಾಗ, ಸಂಪ್ರದಾಯವಾದಿಗಳಿಂದ ತೀವ್ರ ವಿರೋಧ ಬಂದಿದ್ದರೂ, ದೇಶ ವಿದೇಶ ಗಳ ಅನೇಕ ಶಿಲ್ಪ ಕಲಾಭಿಮಾನಿಗಳಿಂದ ಹಾಗೂ ಶಿಲ್ಪಕಲಾ ತಜ್ಞರಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿತ್ತು. ಶಿಲ್ಪಕಲಾ ನೈಪುಣ್ಯತೆಗೆ ಇದು ಜೀವಂತ ಸಾಕ್ಷಿ ಎಂದು ಈ ಶಿಲ್ಪವನ್ನು ಬಿಂಬಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next