ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ.
ಭ್ರಷ್ಟಾಚಾರ ನಿಗ್ರಹಕ್ಕಾಗಿ ದೆಹಲಿ ಸರ್ಕಾರ ಸ್ಥಾಪಿಸಿರುವ ಫೀಡ್ ಬ್ಯಾಕ್ ಯುನಿಟ್ ಅನ್ನು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜಕೀಯ ಉದ್ದೇಶಕ್ಕಾಗಿ ಬೇಹುಗಾರಿಕೆ ನಡೆಸಲು ಬಳಸಿರುವ ಆರೋಪದಲ್ಲಿ ಸಿಸೋಡಿಯಾ ಹಾಗೂ ಇತರೆ ಐವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಸಿಸೋಡಿಯಾ, ಜಾಗೃತ ದಳದ ಮಾಜಿ ಕಾರ್ಯದರ್ಶಿ ಸುಖೇಶ್ ಕುಮಾರ್ ಜೈನ್, ಸಿಐಎಸ್‌ಎಫ್ ನಿವೃತ್ತ ಡಿಐಜಿ ರಾಕೇಶ್ ಕುಮಾರ್ ಸಿನ್ಹಾ, ಗುಪ್ತಚರ ದಳದ(ಐಬಿ) ನಿವೃತ್ತ ಜಂಟಿ ಉಪ ನಿರ್ದೇಶಕ ಪ್ರದೀಪ್ ಕುಮಾರ್ ಪುಂಜ್, ಸಿಐಎಸ್‌ಎಫ್ ನಿವೃತ್ತ ಸಹಾಯಕ ಕಮಾಂಡೆಂಟ್ ಸತೀಶ್ ಖೇತ್ರಪಾಲ್, ದೆಹಲಿ ಸಿಎಂ ಕೇಜ್ರಿವಾಲ್ ಅವರ ಸಲಹೆಗಾರ(ಭ್ರಷ್ಟಾಚಾರ ನಿಗ್ರಹ) ಗೋಪಾಲ್ ಮೋಹನ್ ವಿರುದ್ಧ ಪ್ರಕರಣ ದಾಖಲಾಗಿದೆ.