Advertisement
ಖಾಸಗಿ ಶಾಲೆಗಳಲ್ಲಿ ಮೊಬೈಲ್ ಮೂಲಕ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಇನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆದಿಲ್ಲ. ಕೆಲ ಸರ್ಕಾರಿ ಶಾಲೆಗಳಲ್ಲಿ ಆನ್ ಲೈನ್ ತರಗತಿ ನಡೆಸಲಾಗುತ್ತಿದೆ. ಆದರೆ, ಹಾಡಿಗಳ ಮಕ್ಕಳ ಪೋಷಕರಲ್ಲಿ ಸ್ಮಾರ್ಟ್ ಫೋನ್ ಇಲ್ಲ, ಇದ್ದರೂ ಸರಿಯಾಗಿ ನೆಟ್ ವರ್ಕ್ ಇಲ್ಲದ ಕಾರಣ ಅವರಿಗೆ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣವೇ ಮರೀಚಿಕೆಯಾಗಿತ್ತು.
Related Articles
Advertisement
ಪ್ರತಿದಿನ ಬೆಳಗಿನ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಮಾತ್ರ ನಡೆಯುವ ತರಗತಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಅಷ್ಟೇ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಕರಕುಶಲ ಕಲೆ, ಮಣ್ಣಿನಿಂದ ಆಕೃತಿಗಳ ತಯಾರಿಕೆ, ರಂಗ ಚಟುವಟಿಕೆ, ಆದಿವಾಸಿ ಸಂಪ್ರದಾಯದ ನೃತ್ಯಗಳನ್ನು ಕಲಿಸಲಾಗುತ್ತಿದೆ. ಹಾಡಿಗಳಲ್ಲಿ ಶಾಲೆ ತೆರೆಯಲು ಜೀವಿಕ ಸಂಘಟನೆ ಡಾ.ಉಮೇಶ್ ಬಿ.ನೂರಲಕುಪ್ಪೆ, ದಿಲ್ ಶಾದ್ ಬೇಗಂ, ಶ್ರುತಿ ಮತ್ತು ದಿವ್ಯಾ ತಂಡ ನೆರವಾಗಿದೆ. ಕೊರೊನಾ ಸಂಕಷ್ಟದಲ್ಲಿ ಅದಿವಾಸಿಗಳ ಮಕ್ಕಳ ಕೈಹಿಡಿದಿರುವ ಸಂಘ ಸಂಸ್ಥೆಗಳ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಹಾಡಿಯಲ್ಲಿ ಶಾಲೆ ಹೇಗಿರುತ್ತೆ,ಮಕ್ಕಳಿಗೆ ಯಾವ ರೀತಿ ಕಲಿಕೆ?
ಶಾಲೆ ಎಂದರೆ ಕೊಠಡಿಯೊಳಗೆ ತರಗತಿ ನಡೆಸಿ ಪಾಠ ಹೇಳುವುದು ಎಂಬ ಪರಿಕಲ್ಪನೆ ಇದೆ. ಆದರೆ, ಇದೀಗ ಹಾಡಿಯಲ್ಲಿ ತೆರೆದಿರುವ ಶಾಲೆ ಗಳು ವಿಭಿನ್ನವಾಗಿವೆ. ಹಾಡಿಗಳಲ್ಲಿ ಮೇಲ್ಚಾವಣಿ ಮಾತ್ರ ಇರುವ ಸಂಪ್ರದಾಯಿಕ ಪಂಚಾಯಿತಿ ಕಟ್ಟೆ ಇರುತ್ತದೆ. ಇದಕ್ಕೆ ಯಾವುದೇ ಗೋಡೆ ಗಳು ಇರುವುದಿಲ್ಲ. ಇಂತಹ ಪಂಚಾಯ್ತಿ ಕಟ್ಟೆಗಳನ್ನು ತಾತ್ಕಾಲಿಕ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರತಿದಿನ ಬೆಳಗ್ಗೆ 10 ಗಂಟೆ ಯಿಂದ ಮಧ್ಯಾಹ್ನ 1 ಗಂಟೆಯವರೆಗೆ 3 ಗಂಟೆಗಳ ಕಾಲ ಶಾಲೆ ಇರುತ್ತದೆ. ಒಂದು ಗಂಟೆ ಮಾತ್ರ ಪಾಠ ಹೇಳಿಕೊಡಲಾಗುತ್ತದೆ. ಉಳಿದ ಅವಧಿಯಲ್ಲಿ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ, ಕರಕುಶಲ ಕಲೆಯನ್ನು ಕಲಿಸಲಾಗುತ್ತದೆ. ಹಾಡಿಗಳಲ್ಲಿ ಉನ್ನತ ವ್ಯಾಸಂಗ ಮಾಡಿರುವ ಯುವಕ ಹಾಗೂ ಯುವತಿಯರನ್ನು ಹುಡುಕಿ ಅವರನ್ನೇ ಶಿಕ್ಷಕರನ್ನಾಗಿ ನಿಯೋಜಿಸಲಾಗಿದೆ. -ಎಚ್.ಬಿ.ಬಸವರಾಜು