Advertisement

ದಾವಣಗೆರೆಯಲ್ಲಿ ಒಂದೇ ಕುಟುಂಬದ ಐವರಿಂದ ಸನ್ಯಾಸ ದೀಕ್ಷೆ

09:28 PM Feb 20, 2021 | Team Udayavani |

ದಾವಣಗೆರೆ: ಒಂದೇ ಕುಟುಂಬದ ಮೂರು ತಲೆಮಾರಿನ ಐವರು ಸೋಮವಾರ (ಫೆ. 22) ಬೆಳಗ್ಗೆ 8 ಗಂಟೆಗೆ ಆವರಗೆರೆಯಲ್ಲಿರುವ ಶ್ರೀ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಸ್ಥಾನದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಒಂದೇ ಕುಟುಂಬದ ಐದು ಮಂದಿ ದೀಕ್ಷೆ ಸ್ವೀಕರಿಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಶ್ರೀ ಸುಪಾರ್ಶ್ವನಾಥ ಶ್ವೇತಾಂಬರ ಜೈನ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಪಿ. ಮಹೇಂದ್ರಕುಮಾರ್‌ ಜೈನ್‌ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಿವಾಸಿಗಳಾದ 75 ವರ್ಷದ ವರದಿಚಂದ್‌ ಜೀ, ಅವರ ಪುತ್ರ 47 ವರ್ಷದ ಅಶೋಕ್‌ಕುಮಾರ್‌ ಜೈನ್‌, ಸೊಸೆ 45 ವರ್ಷದ ಭಾವನ ಅಶೋಕ್‌ಕುಮಾರ್‌ ಜೈನ್‌, ಮೊಮ್ಮಕ್ಕಳಾದ 17 ವರ್ಷದ ಪಕ್ಷಾಲ್‌ ಜೈನ್‌ ಹಾಗೂ 15 ವರ್ಷದ ಜಿನಾಂಕ್‌ ಜೈನ್‌ ದೀಕ್ಷೆ ಪಡೆಯಲಿದ್ದಾರೆ. ಇವರೊಂದಿಗೆ ಚೆನ್ನೈನ 23 ವರ್ಷದ ಲಕ್ಷಕುಮಾರ್‌ ಜೈನ್‌ ಸಹ ಸನ್ಯಾಸ ಸ್ವೀಕರಿಸಲಿದ್ದಾರೆ ಎಂದರು.

ಇದನ್ನೂ ಓದಿ:ನಾಡಿನ ಮಹಾಪುರಷರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕು: ಅರವಿಂದ ಲಿಂಬಾವಳಿ

ಆಚಾರ್ಯ ಮೇಘದರ್ಶನ್‌ ಸುರೀಜಿ ಮಹಾರಾಜ, ಆಚಾರ್ಯ ಗಚ್ಛಾದಿಪತಿ ಉದಯ ಪ್ರಭಾ ಸುರೀಜಿ ಮಹಾರಾಜ ಹಾಗೂ ಆಚಾರ್ಯ ಹೀರಚಂದ್ರ ಸುರೀಜಿ ಮಹಾರಾಜರ ಸಾನ್ನಿಧ್ಯದಲ್ಲಿ ಈ ಐತಿಹಾಸಿಕ ದೀಕ್ಷೆ ಕಾರ್ಯಕ್ರಮ ನಡೆಯಲಿದೆ. ದೀಕ್ಷೆ ಸ್ವೀಕಾರ ಹಿನ್ನೆಲೆಯಲ್ಲಿ ಫೆ. 21ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಚೌಕಿಪೇಟೆಯ ಜೈನ ದೇವಸ್ಥಾನದ ಮುಂಭಾಗದಿಂದ ಕೆ.ಆರ್‌. ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಗಾಂಧಿ ವೃತ್ತ ಹಾಗೂ ಗೀತಾ ಮಂದಿರದವರೆಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ನರೇಂದ್ರಕುಮಾರ ಜೈನ್‌, ಜಯತಂದ್‌, ಮಹಾವೀರ ಜೈನ್‌, ಗೌತಮ್‌ ಜೈನ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next