Advertisement
ಇಂತಹ ಹಣತೆಗಳು ಇಂದು ಆಧುನಿಕ ಸ್ಪರ್ಶ ಪಡೆದಿದೆ. ಮಣ್ಣಿನ ಹಣತೆಗಳ ಸ್ಥಾನದಲ್ಲಿ ಪಿಂಗಾಣಿ, ಹಣತೆಗಳು, ಪ್ಲಾಸ್ಟಿಕ್, ಫೈಬರ್ ಹಣತೆಗಳು ಲಗ್ಗೆಯಿಟ್ಟಿವೆ. ದೀಪದ ಕೆಳಗೆ ಕತ್ತಲು ಎಂಬಂತೆ ಮತ್ತೂಬ್ಬರ ಮನೆಯ ದೀಪ ಬೆಳಗಲು ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿನಲ್ಲಿ ಕತ್ತಲು ಅವರಿಸಿದೆ. ದೀಪಾವಳಿ ಹಬ್ಬಕ್ಕೆ ಶ್ರೇಷ್ಟ ಮಣ್ಣಿನ ಹಣತೆಗಳನ್ನು ತಯಾರಿಸುವ ಕುಟುಂಬಗಳಿಗೆ ಇದೀಗ ವೈವಿಧ್ಯ ರೂಪದ ಪಿಂಗಾಣಿ ದೀಪಗಳು ಪೈಪೋಟಿ ನೀಡಿದ್ದು, ಒಂದೆಡೆ ಲೋಹದ ದೀಪಗಳ ಸ್ಟಾಂಡ್‌ಗಳು, ಪೈಬರ್ ದೀಪ, ಪ್ಲಾಸ್ಟಿಕ್ ದೀಪ, ವಿದ್ಯುತ್ ಅಲಂಕಾರಿಕ ಕೃತಕ ದೀಪಗಳು ಬಂದಿರುವುದರಿಂದ ರೇಷ್ಮೆ ಜಿಲ್ಲೆಯ ಕುಂಬಾರಿಕೆ ನೆಚ್ಚಿಕೊಂಡಿರುವ ಕುಟು ಂಬಗಳಿಗೆ ನೀರವ ಮೌನ ಅವರಿಸಿದೆ.
Related Articles
Advertisement
ಮಣ್ಣಿನ ವೈವಿಧ್ಯ ದೀಪಗಳು: ಆಧುನಿಕತೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಿಂದ ಕುಂಬಾರಿಕೆಯ ಕೈ ಚಳಕದಿಂದ ಅರಳಿದ್ದ ದೀಪಗಳು ಹಿಂದೆ ದೀಪಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದವು. ಸುಮಾರು 50 ವರ್ಷದಿಂದ ದೀಪಗಳು, ಮತ್ತಿತ್ತರ ಅಲಂಕಾರಿಕ ವಸ್ತುಗಳ ವ್ಯಾಪಾರ ಮಾಡುವವರಿಗೆ ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರವಾಗದೆ ಬಹಳ ನಷ್ಟವಾಗಿ, ದೀಪಗಳು ಗೂಡು ಸೇರುವಂತಾಗಿದೆ. ಈ ಬಾರಿ ತಕ್ಕಮಟ್ಟಿಗೆ ವ್ಯಪಾರ ನಡೆಯುತ್ತಿದೆ. ಕುಂಬಾರಿಕೆ ಹೊರತು, ಬೇರೆ ಉದ್ಯೋಗ ನಮಗೆ ಬರುವುದಿಲ್ಲ. – ಸಂಜೀವಯ್ಯ ಕುಂಬಾರರು, ಕುಡಿಕೆ ಬೇಗೂರು
ರಂಜಾನ್ ಮಾಸದಿಂದ ಮಡಕೆ, ದೀಪಗಳ ಮಾರಾಟ ಶುರುವಾಗುತ್ತದೆ. ಕಾರ್ತಿಕ ಮಾಸ, ರಥಸಪ್ತಮಿ, ಸಂಕ್ರಾತಿ ಹಬ್ಬಗಳವರೆಗೂ ದೀಪದ ಮಾರಾಟವಿರುತ್ತದೆ. ನಮ್ಮ ಕುಟುಂಬಗಳ ಮೂಲ ಕಸುಬಾಗಿದ್ದ ಮಡಕೆ ತಯಾರಿಕೆ, ಇಂದು ಉಪಕಸುಬಾಗಿದೆ. – ರಾಜಣ್ಣ ಬಾಣವಾಡಿ, ಕುಂಬಾರರು
ಪ್ಲಾಸ್ಟಿಕ್ ವಸ್ತುಗಳ ಬಳಕೆ ಬಂದ ಮೇಲೆ ಕುಂಬಾರಿಕೆಗೆ ಕುತ್ತು ಬಂದಿದೆ. ಸರ್ಕಾರ ಕುಲ ಕಸುಬುದಾರರ ನೆರವಿಗೆ ಬರಬೇಕು. – ಕೆ.ಆರ್.ಯತಿರಾಜು, ಮಾಜಿ ಅಧ್ಯಕ್ಷರು, ತಾಪಂ
ಕೊರೊನಾ ಮಹ ಮಾರಿಯಿಂದಾಗಿ ದೀಪಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಈಗ ಸ್ವಲ್ಪ ಚೇತರಿಸಿಕೊಂಡಿದೆ. ಹಣತೆ ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. – ರೂಪ ಮಂಜುನಾಥ್, ವ್ಯಾಪಾರಸ್ಥರು
– ಕೆ.ಎಸ್.ಮಂಜುನಾಥ್